Sunday, June 7, 2026
Homeಕರಾವಳಿ ಮಂಗಳೂರು; ಬೈಕ್ ಹಾಗೂ ಕಾರಿನ ಮಧ್ಯೆ ಅಪಘಾತ; ತಂದೆ ಸಾವು, ಮಗನಿಗೆ ಗಂಭೀರ ಗಾಯ

 ಮಂಗಳೂರು; ಬೈಕ್ ಹಾಗೂ ಕಾರಿನ ಮಧ್ಯೆ ಅಪಘಾತ; ತಂದೆ ಸಾವು, ಮಗನಿಗೆ ಗಂಭೀರ ಗಾಯ

- Advertisement -
- Advertisement -

ಮಂಗಳೂರು; ಬೈಕ್ ಹಾಗೂ ಕಾರಿನ ಮಧ್ಯೆ ಭೀಕರ  ಅಪಘಾತ ಸಂಭವಿಸಿ ತಂದೆ ಸಾವನ್ನಪ್ಪಿ, ಮಗನಿಗೆ ಗಂಭೀರ ಗಾಯಗಳಾಗಿರುವ ಘಟನೆ ಉಳ್ಳಾಲದ ಚೆಂಬುಗುಡ್ಡೆ ಬಳಿ ನಡೆದಿದೆ.

 ಅಳೇಕಲ ನಿವಾಸಿ ಅಬ್ಬಾಸ್(58) ಮೃತ ದುರ್ದೈವಿ. ಅಬ್ಬಾಸ್ ಅವರು ಶನಿವಾರ ಬೆಳಗ್ಗೆ ಮಗ ನೌಶಾದ್ ಜತೆ ಬೈಕ್‍ನಲ್ಲಿ ದೇರಳಕಟ್ಟೆಗೆ ತೆರಳುತ್ತಿದ್ದಾಗ ಚೆಂಬುಗುಡ್ಡೆ ಬಳಿ ಕಾರೊಂದು ಬೈಕ್‍ಗೆ ಢಿಕ್ಕಿ ಹೊಡೆದಿದೆ. ಢಿಕ್ಕಿ ಹೊಡೆದ ರಭಸಕ್ಕೆ ಬೈಕ್‍ನಲ್ಲಿದ್ದ ಇಬ್ಬರು ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದು, ಈ ಪೈಕಿ ತಂದೆ ಅಬ್ಬಾಸ್ ಅವರನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಗಂಭೀರ ಗಾಯಗೊಂಡ ನೌಶಾದ್‍ನನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!