Thursday, June 25, 2026
Homeಕರಾವಳಿಸುಳ್ಯದಲ್ಲಿ ಗೂಡಂಗಡಿಯಲ್ಲಿ ಕಳ್ಳತನ ಮಾಡಿದ ಕಳ್ಳರು

ಸುಳ್ಯದಲ್ಲಿ ಗೂಡಂಗಡಿಯಲ್ಲಿ ಕಳ್ಳತನ ಮಾಡಿದ ಕಳ್ಳರು

- Advertisement -
- Advertisement -

ಸುಳ್ಯದಲ್ಲಿ ಕಳ್ಳರ ಹಾವಳಿ ಮಿತಿ ಮೀರಿದ್ದು ಗೂಡಂಗಡಿಯೊಂದರಲ್ಲಿ ಕಳ್ಳತನ ಮಾಡಿದ್ದಾರೆ.ವಿಷ್ಣು ಸರ್ಕಲ್‌ ಬಳಿ ಇರುವ ವೆಂಕಪ್ಪ ಗೌಡ ಅವರ ಅಂಗಡಿ ಮತ್ತು ಮುಂಭಾಗದಲ್ಲಿರುವ ಅವಿಲ್‌ ಮಿಲ್ಕ್ ಹೆಸರಿನ ಗೂಡಂಗಡಿಯಲ್ಲಿ ಕಳ್ಳತನ ಮಾಡಿದ್ದಾರೆ.

ವೆಂಕಪ್ಪ ಅವರ ಗೂಡಂಗಡಿಯ ಬೀಗ ಮುರಿದು ಅದರೊಳಗಿದ್ದ ಕೆಲವು ವಸ್ತುಗಳು ಸಹಿತ ಡಬ್ಬದಲ್ಲಿದ್ದ ಸುಮಾರು 5 ಸಾವಿರ ರೂ. ನಗದನ್ನು ಕಳವು ಮಾಡಿದ್ದು, ಮುಂಭಾಗದ ಅವಿಲ್‌ ಮಿಲ್ಕ ಅಂಗಡಿಯ ಬಾಗಿಲನ್ನು ಮುರಿದು ಕ್ಯಾಶ್‌ ಡಬ್ಬ ದಲ್ಲಿದ್ದ ಚಿಲ್ಲರೆ ಹಣವನ್ನು ಕಳವುಗೈದಿದ್ದಾರೆ. ಕಳ್ಳತನಕ್ಕೆ ತಂದಿರುವ ಕಬ್ಬಿಣದ ರಾಡನ್ನು ಕಳ್ಳರು ಅಂಗಡಿಯ ಬಳಿಯೇ ಬಿಟ್ಟು ಹೋಗಿರುವುದು ಪತ್ತೆಯಾಗಿದೆ. ಸುಳ್ಯ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

- Advertisement -

Latest News

error: Content is protected !!