Sunday, June 7, 2026
Homeತಾಜಾ ಸುದ್ದಿಚುನಾವಣಾ ಪ್ರಚಾರದ ವೇಳೆ ಮುಖ್ಯಮಂತ್ರಿ ಮೇಲೆ ಹಲ್ಲೆ: ವರದಿ ಕೋರಿದ ಚುನಾವಣಾ ಆಯೋಗ

ಚುನಾವಣಾ ಪ್ರಚಾರದ ವೇಳೆ ಮುಖ್ಯಮಂತ್ರಿ ಮೇಲೆ ಹಲ್ಲೆ: ವರದಿ ಕೋರಿದ ಚುನಾವಣಾ ಆಯೋಗ

- Advertisement -
- Advertisement -

ಕೊಲ್ಕತ್ತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಚುನಾವಣಾ ರಾಲಿ ವೇಳೆ ಗಾಯಗೊಂಡಿರುವ ಘಟನೆ ಇಂದು ನಂದಿಗ್ರಾಮದಲ್ಲಿ ನಡೆದಿದೆ. ಅವರ ಕಾಲಿಗೆ ಮತ್ತು ಮುಖಕ್ಕೆ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

ಮಮತಾ ಬ್ಯಾನರ್ಜಿ ಅವರು ನಂದಿಗ್ರಾಮ ವಿಧಾನಸಭಾ ಸ್ಥಾನಕ್ಕೆ ಇಂದು ನಾಮಪತ್ರ ಸಲ್ಲಿಸಿದ ಬಳಿಕ ಈ ಘಟನೆ ನಡೆದಿದೆ. ಅವರು ಕಾರು ಹತ್ತುವಾಗ 4 ರಿಂದ 5 ಜನರು ನೂಕಿದ್ದು ಅವರ ಬಲಗಾಲಿಗೆ ಗಾಯವಾಗಿದೆ. ಈ ವೇಳೆ ಪೊಲೀಸರು ಇರಲಿಲ್ಲ ಎಂದು ವರದಿಯಾಗಿದೆ. ‘ಯಾರೋ ಕಿಡಗೇಡಿಗಳು ನನ್ನನ್ನು ಬಲವಾಗಿ ನೂಕಿದ್ದರಿಂದ ಬಲಗಾಲಿಗೆ ಗಾಯವಾಗಿದೆ, ಮುಖವನ್ನು ಕೈ ಬೆರಳುಗಳಿಂದ ಪರಚಲಾಗಿದೆ’ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.

ಈ ಕ್ಷೇತ್ರದಿಂದಲೇ ಮಮತಾ ಬ್ಯಾನರ್ಜಿ ಸ್ಪರ್ಧಿಸಲಿದ್ದು, ಅವರ ಪ್ರತಿಸ್ಪರ್ಧಿಯಾಗಿ ಬಿಜೆಪಿಯಿಂದ ಸುವೆಂದು ಅಧಿಕಾರಿ ಕಣಕ್ಕಿಳಿಯಲಿದ್ದಾರೆ. ಘಟನೆಯ ನಂತರ, ಮಮತಾ ಅವರು ರಾತ್ರಿ ನಂದಿಗ್ರಾಮದಲ್ಲಿ ಉಳಿಯುವ ಯೋಜನೆಯನ್ನು ಕೈಬಿಟ್ಟು ತಕ್ಷಣ ಕೋಲ್ಕತ್ತಾಗೆ ತೆರಳಿದ್ದಾರೆ. ಅವರನ್ನು ಕೊಲ್ಕೊತ್ತಾದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎನ್ನಲಾಗಿದೆ.

- Advertisement -

Latest News

error: Content is protected !!