Sunday, June 7, 2026
Homeಕರಾವಳಿಉಡುಪಿಮಣಿಪಾಲ: ಬಿರಿಯಾನಿ ಆರ್ಡರ್ ತಡವಾಗಿದ್ದಕ್ಕೆ ಹೊಟೇಲ್‌ ಮಾಲೀಕನ ಮೇಲೆ ಹಲ್ಲೆ

ಮಣಿಪಾಲ: ಬಿರಿಯಾನಿ ಆರ್ಡರ್ ತಡವಾಗಿದ್ದಕ್ಕೆ ಹೊಟೇಲ್‌ ಮಾಲೀಕನ ಮೇಲೆ ಹಲ್ಲೆ

- Advertisement -
- Advertisement -

ಮಣಿಪಾಲ: ಆರ್ಡರ್ ಮಾಡಿದ ಬಿರಿಯಾನಿ ತಡವಾಗಿ ಕೊಟ್ಟರು ಎಂಬ ಕಾರಣಕ್ಕೆ ಭೂಪನೊಬ್ಬ ಹೊಟೇಲ್ ಮಾಲೀಕನಿಗೇ  ಸ್ಯಾನಿಟೈಸರ್ ಸ್ಟ್ಯಾಂಡ್ ನಿಂದ ಹಲ್ಲೆ ನಡೆಸಿರುವ ಘಟನೆ ಮಣಿಪಾಲದಲ್ಲಿ ರಾತ್ರಿ ನಡೆದಿದೆ.

ಮಣಿಪಾಲದ ಡಿಷಸ್ ಹೊಟೇಲಿನಲ್ಲಿ ರಾತ್ರಿ ಹನ್ನೊಂದು ಘಂಟೆಗೆ ಪಡುಕೆರೆಯ ನಂದನ್ ಎನ್ನುವಾತ ಬಿರಿಯಾನಿ ಅರ್ಡರ್ ಮಾಡಿದ್ದ. ಬಿರಿಯಾನಿ ನೀಡಲು  ತಡವಾಗಿದ್ದಕ್ಕೆ ಏಕಾ ಏಕಿ ಏರುದನಿಯಲ್ಲಿ ಯಾಕೆ ಲೇಟು ಅನ್ನುತ್ತಾ ಗಲಾಟೆ ಶುರು ಮಾಡಿದಾಗ ಗ್ರಾಹಕನನ್ನು ಹೊಟೇಲ್ ಮಾಲೀಕ ಸಮಾಧಾನಪಡಿಸಿದ್ದಾರೆ.

ಇಷ್ಟಕ್ಕೆ ಸಮಾಧಾನಗೊಳ್ಳದ ಗ್ರಾಹಕ ನಂದನ್  ಎಂಬಾತ ಅಲ್ಲಿದ್ದ ಸ್ಯಾನಿಟೈಸರ್ ಸ್ಟ್ಯಾಂಡ್ ಹಿಡಿದು ನಿನ್ನನ್ನು ಮುಗಿಸಿ ಬಿಡುತ್ತೇನೆ ಎಂದು ಹೇಳುತ್ತಾ ಹಲ್ಲೆ ಮಾಡಿದ್ದಾನೆ.ಇದರಿಂದಾಗಿ ಹೊಟೇಲ್ ಮಾಲೀಕನ ಎಡಕೈಗೆ ಗಾಯವಾಗಿದೆ. ತಡೆಯಲು ಹೋದ ಕೆಲಸಗಾರನ ಮೇಲೆಯೂ ಹಲ್ಲೆ ನಡೆಸಿದ್ದಾನೆ. ಹಲ್ಲೆ ನಡೆಸಿರುವ ನಂದನ್ ಪಡುಕೆರೆ ಎನ್ನುವ ಗ್ರಾಹಕನ ವಿರುದ್ದ ಹೊಟೇಲ್ ಮಾಲೀಕ ಮಣಿಪಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

- Advertisement -

Latest News

error: Content is protected !!