Thursday, June 4, 2026
Homeತಾಜಾ ಸುದ್ದಿವಿಧಾನಸಭೆ ಡೆಪ್ಯುಟಿ ಸ್ಪೀಕರ್ ಆನಂದ್ ಮಾಮನಿ ನಿಧನ

ವಿಧಾನಸಭೆ ಡೆಪ್ಯುಟಿ ಸ್ಪೀಕರ್ ಆನಂದ್ ಮಾಮನಿ ನಿಧನ

- Advertisement -
- Advertisement -

ಬೆಂಗಳೂರು: ವಿಧಾನಸಭೆ ಡೆಪ್ಯುಟಿ ಸ್ಪೀಕರ್ ಆನಂದ್ ಚಂದ್ರಶೇಖರ ಮಾಮನಿ ನಿಧನರಾಗಿದ್ದಾರೆ.

ಮಧ್ಯರಾತ್ರಿ 12.15 ರ ವೇಳೆಗೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಆನಂದ್ ಮಾಮನಿ ಕೊನೆಯುಸಿರೆಳೆದಿದ್ದು, ಇಂದು ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ಮೂರು ಬಾರಿ ಸವದತ್ತಿ-ಯಲ್ಲಮ್ಮ ಕ್ಷೇತ್ರದ ಬಿಜೆಪಿ ಶಾಸಕರಾಗಿದ್ದ ಆನಂದ್ ಮಾಮನಿ 2020 ರಲ್ಲಿ ವಿಧಾನಸಭೆಯ ಡೆಪ್ಯುಟಿ ಸ್ಪೀಕರ್ ಆಗಿ ನೇಮಕಗೊಂಡಿದ್ದರು.

ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಆನಂದ್ ಮಾಮನಿ ಆರೋಗ್ಯ ಆಗಸ್ಟ್ ತಿಂಗಳಿನಲ್ಲಿ ಉಲ್ಬಣಿಸಿತ್ತು. ಬಳಿಕ ಚಿಕಿತ್ಸೆಗಾಗಿ ಚೆನ್ನೈನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅನಂತರ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಸ್ಥಳಾಂತರಿಸಿ ಚಿಕಿತ್ಸೆ ಮುಂದುವರಿಸಲಾಗಿತ್ತು.

- Advertisement -

Latest News

error: Content is protected !!