Friday, June 5, 2026
Homeಕರಾವಳಿವಿಟ್ಲ; ಅತ್ಯಾಚಾರಕ್ಕೆ ಯತ್ನ ಆರೋಪ: ಮಹಿಳೆಯಿಂದ ದೂರು ದಾಖಲು

ವಿಟ್ಲ; ಅತ್ಯಾಚಾರಕ್ಕೆ ಯತ್ನ ಆರೋಪ: ಮಹಿಳೆಯಿಂದ ದೂರು ದಾಖಲು

- Advertisement -
- Advertisement -

ವಿಟ್ಲ; ವ್ಯಕ್ತಿಯೋರ್ವ ಕೈಹಿಡಿದು ಎಳೆದು ಅತ್ಯಾಚಾರಕ್ಕೆ‌ ಯತ್ನಿಸಿದ್ದಾನೆಂದು ಆರೋಪಿಸಿ ಮಹಿಳೆಯೋರ್ವರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಬಂಟ್ವಾಳ ತಾಲೂಕು ಕನ್ಯಾನ ಗ್ರಾಮದ ಮಹಿಳೆಯೊಬ್ಬರು ಸಂತೋಷ್ ಎಂಬಾತ ಕಳೆದ ಕೆಲಸಮಯಗಳಿಂದ ನನ್ನ ಮೊಬೈಲ್ ಗೆ ದೂರವಾಣಿ ಕರೆ ಮಾಡಿ ಮಾತನಾಡುತ್ತಿದ್ದ. ಅ.21ರಂದು ಸಂಜೆ ನಾನು ಗಂಡನ ಮನೆಯಿಂದ ನನ್ನ ಮನೆಗೆ ತೆರಳುತ್ತಿದ್ದ‌ ವೇಳೆ ಬೈಕಿನಲ್ಲಿ ಬಂದು ದಾರಿ ಮಧ್ಯೆ ನನ್ನನ್ನು ತಡೆದು ನಿಲ್ಲಿಸಿ ಕೈಹಿಡಿದೆಳೆದು ಮಾನಭಂಗಕ್ಕೆ ಯತ್ನಿಸಿದ್ದು, ಈ ವೇಳೆ ಇಬ್ಬರು ಬಂದ ಹಿನ್ನೆಲೆ ಆತ ನನ್ನನ್ನು ಬಿಟ್ಟು ಪರಾರಿಯಾಗಿದ್ದಾನೆ‌ ಎಂದು ಮಹಿಳೆ ದೂರಿನಲ್ಲಿ‌ ತಿಳಿಸಿದ್ದಾರೆ.ಈ ಕುರಿತು ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!