Sunday, April 28, 2024
Homeಕರಾವಳಿಉಡುಪಿಕರಾವಳಿಯ ಮೂರು ಜಿಲ್ಲೆಗಳಲ್ಲಿ ಸೇನಾ ಆಯ್ಕೆಯ ಪೂರ್ವ ತರಬೇತಿ ಸಂಸ್ಥೆ ಆರಂಭ: ಸಚಿವ ಕೋಟಾ ಶ್ರೀನಿವಾಸ್‌...

ಕರಾವಳಿಯ ಮೂರು ಜಿಲ್ಲೆಗಳಲ್ಲಿ ಸೇನಾ ಆಯ್ಕೆಯ ಪೂರ್ವ ತರಬೇತಿ ಸಂಸ್ಥೆ ಆರಂಭ: ಸಚಿವ ಕೋಟಾ ಶ್ರೀನಿವಾಸ್‌ ಹೇಳಿಕೆ

spot_img
- Advertisement -
- Advertisement -

ಉಡುಪಿ: ಭಾರತೀಯ ಸೇನೆಗೆ ಸೇರಲು ಇಚ್ಛಿಸುವ ಅರ್ಹ ಆಸಕ್ತರಿಗೆ ಪೂರ್ವ ತರಬೇತಿ ನೀಡುವ ನಿಟ್ಟಿನಲ್ಲಿ, ಹಿಂದುಳಿದ ವರ್ಗಗಳ ಇಲಾಖೆಯಿಂದ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಸೇನಾ ಆಯ್ಕೆಯ ಪೂರ್ವ ತರಬೇತಿ ಸಂಸ್ಥೆಯನ್ನು ಆರಂಭಿಸುವುದಾಗಿ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಉ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಉಡುಪಿಯಲ್ಲಿ ಮಾತನಾಡಿದ ಅವರು, ಉಡುಪಿ ಸೇರಿದಂತೆ ಕರಾವಳಿಯ ಮೂರು ಜಿಲ್ಲೆಯ ಸೇನಾ ಆಯ್ಕೆ ಪೂರ್ವ ತರಬೇತಿ ಸಂಸ್ಥೆಗೆ ಕೋಟಿ ಚೆನ್ನಯ್ಯ, ದಕ್ಷಿಣ ಕನ್ನಡ ಜಿಲ್ಲೆಯ ಸಂಸ್ಥೆಗೆ ರಾಣಿ ಅಬ್ಬಕ್ಕ ಹಾಗೂ ಉತ್ತರ ಕನ್ನಡ ಜಿಲ್ಲೆಯ ಸಂಸ್ಥೆಗೆ ಹಿಂಜಾ ನಾಯ್ಕ ಅವರ ಹೆಸರು ಇಡಲಾಗುತ್ತದೆ ಎಂದರು. ಈ ಬಗ್ಗೆ ಈ ತಿಂಗಳಿನಲ್ಲಿ ಘೋಷಣೆ ಮಾಡಲಿದ್ದು, 50 ಜನರಂತೆ 6 ತಿಂಗಳ ತರಬೇತಿ ನೀಡಲಾಗುತ್ತದೆ. ಆರಂಭದಲ್ಲಿ ಯುವಕರಿಗೆ ಮೊದಲ ಆದ್ಯತೆ ಮೇರೆಗೆ ತರಬೇತಿ ಕೊಡಲಾಗುವುದು. ವರ್ಷಕ್ಕೆ 100 ಜನರನ್ನು ತರಬೇತಿ ಕೊಟ್ಟು ಸಜ್ಜುಗೊಳಿಸಲಾಗುವುದು ಎಂದರು.

- Advertisement -
spot_img

Latest News

error: Content is protected !!