Thursday, June 4, 2026
Homeಕರಾವಳಿಉಡುಪಿಉಡುಪಿ: ಟೆಂಪೋ ಹಾಗೂ ವಾಹನ ಚಾಲಕರ ನಡುವೆ ವಾಗ್ವಾದ, ಬಳಿಕ ಕಲ್ಲು ತೂರಾಟ !

ಉಡುಪಿ: ಟೆಂಪೋ ಹಾಗೂ ವಾಹನ ಚಾಲಕರ ನಡುವೆ ವಾಗ್ವಾದ, ಬಳಿಕ ಕಲ್ಲು ತೂರಾಟ !

- Advertisement -
- Advertisement -

ಉಡುಪಿ: ಹೂಡೆಯಲ್ಲಿ ಕಲ್ಲು ತೂರಾಟದಿಂದ ಎರಡು ಕಾರುಗಳಿಗೆ ಹಾನಿಯಾಗಿದೆ. ಮರಳು ಸಾಗಾಟದ ಟೆಂಪೋವನ್ನು ಏಕಾಏಕಿ ಚಲಾಯಿಸುತ್ತಿದ್ದರು ಎನ್ನಲಾಗಿದೆ. ಹಂಪನಕಟ್ಟೆ, ಕೆಮ್ಮಣ್ಣು ನಿವಾಸಿಗಳು ಟೆಂಪೋವನ್ನು ಅಡ್ಡಗಟ್ಟಿದ ಪರಿಣಾಮ ಟೆಂಪೋ ಚಾಲಕನ ನಡುವೆ ವಾಗ್ವಾದ ನಡೆದಿದೆ. ಆ ಸಮಯದಲ್ಲಿ ಕಲ್ಲು ತೂರಾಟವೂ ನಡೆದಿದೆ.

ವಿಷಯ ತಿಳಿದ ಮಲ್ಪೆ ಸಬ್ ಇನ್ಸ್ ಪೆಕ್ಟರ್ ಶಕ್ತಿವೇಲು ಅವರು ತಮ್ಮ ಖಾಸಗಿ ವಾಹನದಲ್ಲಿ ಸ್ಥಳಕ್ಕೆ ಆಗಮಿಸಿದರು. ಠಾಣೆಯ ರಾತ್ರಿ ಕರ್ತವ್ಯದ ಸಿಬ್ಬಂದಿ ಕೂಡ ಸ್ಥಳಕ್ಕೆ ಆಗಮಿಸಿದರು.

ಸಬ್ ಇನ್ಸ್ ಪೆಕ್ಟರ್ ಅವರ ಖಾಸಗಿ ವಾಹನಕ್ಕೆ ಕಲ್ಲು ತೂರಾಟ ನಡೆದಿದೆ. ಆದರೆ ಯಾವುದೇ ವ್ಯಕ್ತಿಗಳು ಗಾಯಗೊಂಡಿಲ್ಲ. ಮಲ್ಪೆ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬನನ್ನು ಬಂಧಿಸಲಾಗಿದೆ.

- Advertisement -

Latest News

error: Content is protected !!