Friday, April 26, 2024
Homeತಾಜಾ ಸುದ್ದಿಮತ್ತೆ ಲಾಕ್ ಡೌನ್ ಎಂದು ಸುಳ್ಳು ಸುದ್ದಿ ಹಬ್ಬಿಸಿದರೆ ಕಠಿಣ ಕ್ರಮ: ಆರೋಗ್ಯ ಸಚಿವ ಡಾ.ಕೆ.ಸುಧಾಕರ್

ಮತ್ತೆ ಲಾಕ್ ಡೌನ್ ಎಂದು ಸುಳ್ಳು ಸುದ್ದಿ ಹಬ್ಬಿಸಿದರೆ ಕಠಿಣ ಕ್ರಮ: ಆರೋಗ್ಯ ಸಚಿವ ಡಾ.ಕೆ.ಸುಧಾಕರ್

spot_img
- Advertisement -
- Advertisement -

ಬೆಂಗಳೂರು: ಕೋವಿಡ್ ಒಂದನೇ ಮತ್ತು ಎರಡನೇ ಅಲೆ ಬಂದು ಇಡೀ ರಾಜ್ಯವನ್ನು ಬದಲು ಮಾಡಿದೆ. ಪ್ರತೀ ನಿತ್ಯ ಜನರು ಆತಂಕದಲ್ಲೇ ಬದುಕುತ್ತಿದ್ದಾರೆ. ಆರ್ಥಿಕ ಸ್ಥಿತಿ ಹದಗೆಟ್ಟಿತ್ತು, ಏಷ್ಟೋ ಜನ ಜೀವ ಕಳೆದುಕೊಂಡರು.

ಈ ಹಿಂದಿನ ಲಾಕ್ ಡೌನ್ ನಿಂದ ಜನರಿಗೆ ಸಾಕಷ್ಟು ತೊಂದರೆಗಳು ಕೂಡ ಆಗಿವೆ. ಈಗ ಮತ್ತೊಂದು ಆತಂಕ ಮನೆ ಮಾಡಿದೆ. ಕೊರೋನ ರೂಪಾಂತರ ತಳಿ ಕುರಿತು ಭಯ ಉಂಟಾಗಿದೆ. ಇದರ ಕುರಿತು ಮತ್ತೆ ಲಾಕ್ ಡೌನ್ ಎಂಬ ಸುಳ್ಳು ಸುದ್ದಿ ಹರಿದಾಡುತ್ತಿದೆ.

ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಮತ್ತೊಮ್ಮೆ ಲಾಕ್ ಡೌನ್ ಪ್ರಸ್ತಾಪ ಸರಕಾರದ ಮುಂದೆ ಇಲ್ಲ. ಆದರೆ ಕೆಲವೊಂದು ಮಾಧ್ಯಮಗಳಲ್ಲಿ ಮತ್ತೆ ಲಾಕ್ಡೌನ್ ಸುಳ್ಳು ಮಾಹಿತಿಯನ್ನು ಹಾಕಲಾಗುತ್ತಿದೆ ಆದ್ದರಿಂದ ಲಾಕ್ ಡೌನ್ ಹೇರುವ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ ಎಂದು ಆರೋಗ್ಯ ಸಚಿವ ಡಾಕ್ಟರ್ ಸುಧಾಕರ್ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಬಹಳ ವೇಗವಾಗಿ ಸುಳ್ಳು ಸುದ್ದಿ ಸಾಗುತ್ತಿದೆ. ಸುಳ್ಳು ಸುದ್ದಿಯನ್ನು ಹರಡಿಸುವವರ ಕುರಿತು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

- Advertisement -
spot_img

Latest News

error: Content is protected !!