Thursday, June 4, 2026
HomeUncategorizedವಿಟ್ಲ: ಅಂಗಳದಲ್ಲಿದ್ದ ಅಡಿಕೆ ಕಳವು; ಕದೀಮರು ಪೊಲೀಸರ ವಶ

ವಿಟ್ಲ: ಅಂಗಳದಲ್ಲಿದ್ದ ಅಡಿಕೆ ಕಳವು; ಕದೀಮರು ಪೊಲೀಸರ ವಶ

- Advertisement -
- Advertisement -

ವಿಟ್ಲ: ವಿಟ್ಲ ಪೋಲಿಸ್ ಠಾಣಾ ವ್ಯಾಪ್ತಿಯ ಕೊಳ್ಳಾಡು ಗ್ರಾಮದ ನೀರಪಳಿಕೆಯ ಬಾರೆಬೆಟ್ಟು ಎಂಬಲ್ಲಿ ಮೊಹಮ್ಮದ್ ಮುಸ್ತ ಎಂಬುವವರ ಮನೆಯ ಅಂಗಳದಲ್ಲಿ ಒಣಗಲು ಹಾಕಿದ ಅಡಿಕೆಗಳನ್ನು ಕಳವುಗೈದ ಪ್ರಕರಣ ದಾಖಲಾಗಿದ್ದು. ಸಂಬಂಧಪಟ್ಟು, ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.


ಇತ್ತೀಚೆಗೆ ರಾತ್ರಿ ವೇಳೆ ಸುಮಾರು 3500 ಅಡಿಕೆ ಕಳವಾಗಿರುವ ಬಗ್ಗೆ ದೂರು ದಾಖಲಾಗಿದೆ. ಈ ಪ್ರಕರಣಕ್ಕೆ ಸಂಬಂಧಪಟ್ಟು ಮಂಗಳೂರು ತಾಲೂಕು ಕಣ್ಣೂರು ಗ್ರಾಮದ ಗಾಣದ ಬೆಟ್ಟು ಎಂಬಲ್ಲಿ ನಾಲ್ಕು ಜನ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕರು ಈ ಕೃತ್ಯವನ್ನು ಎಸಗಿರುವುದಾಗಿದೆ. ಇವರಿಂದ ಕಳ್ಳತನವಾದ ಸುಮಾರು 3500 ಅಡಿಕೆ ಹಾಗೂ ಪ್ರಕರಣಕ್ಕೆ ಶಾಮೀಲಾದ ಎರಡು ಮೋಟಾರ್ ಸೈಕಲುಗಳನ್ನು ವಶಪಡಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

- Advertisement -

Latest News

error: Content is protected !!