Wednesday, June 24, 2026
Homeತಾಜಾ ಸುದ್ದಿಉಪೇಂದ್ರ ಹೊಸ ಚಿತ್ರ ʼನೆಕ್ಸ್ಟ್‌ ಲೆವೆಲ್‌ʼಗೆ ಆರಾಧನಾ ರಾಮ್‍ ನಾಯಕಿ

ಉಪೇಂದ್ರ ಹೊಸ ಚಿತ್ರ ʼನೆಕ್ಸ್ಟ್‌ ಲೆವೆಲ್‌ʼಗೆ ಆರಾಧನಾ ರಾಮ್‍ ನಾಯಕಿ

- Advertisement -
- Advertisement -


‘ಕಾಟೇರ’ ಚಿತ್ರದ ನಾಯಕಿ ಆರಾಧನಾ ರಾಮ್‍ ಉಪೇಂದ್ರ ನಟನೆಯ ‘ನೆಕ್ಸ್ಟ್ ಲೆವೆಲ್‍’ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.

‘ಕಾಟೇರ’ ಚಿತ್ರದಲ್ಲಿ ಹಳ್ಳಿ ಹುಡುಗಿಯಾಗಿ ನಟಿಸಿದ್ದ ಆರಾಧನಾ, ಈ ಚಿತ್ರದಲ್ಲಿ ಮುಖ್ಯಮಂತ್ರಿಯ ಮಗಳಾಗಿ ನಟಿಸುತ್ತಿರುವುದು ವಿಶೇಷ. ಈ ಚಿತ್ರವನ್ನು ತರುಣ್‍ ಶಿವಪ್ಪ ಅವರು ನಿರ್ಮಿಸುತ್ತಿದ್ದಾರೆ ಎನ್ನಲಾಗಿದೆ. ರೆ.

ಇದು ಪ್ಯಾನ್‌ ಇಂಡಿಯಾ ಚಿತ್ರವಾಗಿದ್ದು, ಅರವಿಂದ್‌ ಕೌಶಿಕ್‌ ನಿರ್ದೇಶನದಲ್ಲಿ ಮೂಡಿಬರುತ್ತಿದೆ.

‘ಭಾರ್ಗವ’ ಮತ್ತು ‘ನೆಕ್ಸ್ಟ್ ಲೆವೆಲ್‍’ ಚಿತ್ರಗಳಲ್ಲದೆ ತೆಲುಗಿನ ರಾಮ್‍ ಪೋತಿನೇನಿ ಅಭಿನಯದ ಹೊಸ ಚಿತ್ರದಲ್ಲಿ ಉಪೇಂದ್ರ ನಟಿಸುತ್ತಿದ್ದು, ಇದರ ಜೊತೆಗೆ ‘ಕರ್ವ’ ನವನೀತ್‍ ನಿರ್ದೇಶನದ ಹೊಸ ಚಿತ್ರದಲ್ಲಿ ನಟಿಸುತ್ತಿರುವ ಸುದ್ದಿಯೂ ಇದೆ.

- Advertisement -

Latest News

error: Content is protected !!