Friday, June 26, 2026
Homeಕರಾವಳಿಸುಳ್ಯ: ಇಸ್ಲಾಮಿಕ್ ಧರ್ಮಾಂಧತೆ ಹಿಂಸಾಚಾರದ ವಿರುದ್ಧ ಕ್ರಮ ಕೈಗೊಳ್ಳಲು ತಹಶೀಲ್ದಾರರಿಗೆ ಮನವಿ

ಸುಳ್ಯ: ಇಸ್ಲಾಮಿಕ್ ಧರ್ಮಾಂಧತೆ ಹಿಂಸಾಚಾರದ ವಿರುದ್ಧ ಕ್ರಮ ಕೈಗೊಳ್ಳಲು ತಹಶೀಲ್ದಾರರಿಗೆ ಮನವಿ

- Advertisement -
- Advertisement -

ಸುಳ್ಯ: ದೇಶದಲ್ಲಿ ಹೆಚ್ಚುತ್ತಿರುವ ಇಸ್ಲಾಮಿಕ್ ಜಿಹಾದಿ ಧರ್ಮಾಂಧತೆ ಮತ್ತು ಹಿಂಸಾಚಾರದ ವಿರುದ್ಧ ಕ್ರಮ ಕೈಗೊಳ್ಳುವಂತೆ ಸುಳ್ಯ ವಿಶ್ವ ಹಿಂದೂ ಪರಿಷತ್ ಭಜರಂಗದಳ ಸಂಘಟನೆಯ ಕಾರ್ಯಕರ್ತರು ತಹಸೀಲ್ದಾರ್ ಗೆ ಮನವಿ ಸಲ್ಲಿಸಿದರು.


ಕೆಲ ದಿನಗಳಿಂದ ಹಿಂದೂಗಳ ಮೇಲೆ ವ್ಯವಸ್ಥಿತ ವಾಗಿ ದಾಳಿ ಮಾಡಲಾಗುತ್ತಿದೆ. ಶ್ರೀರಾಮ ನವಮಿಯಂದು ದೇಶಾದ್ಯಂತ ಮೆರವಣಿಗೆಗಳ ಮೇಲೆ ಕಲ್ಲು ತೂರಾಟ ಮತ್ತು ವ್ಯವಸ್ಥಿತವಾಗಿ ದಾಳಿಗಳನ್ನು ನಡೆಸಲಾಗಿದೆ. ಇದರಿಂದಾಗಿ ಹಲವೆಡೆ ಕರ್ಪ್ಯೂ ವಿಧಿಸಲಾಗಿದ್ದು, ದೇಶಾದ್ಯಂತ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಹಿಂದೂ ಸಮಾಜವು ತಾಳ್ಮೆಯನ್ನು ಕಾಯ್ದುಕೊಂಡಿತು. ಹನುಮ ಜಯಂತಿಯ ಮೆರವಣಿಗೆ ಮೇಲೆ ಕಲ್ಲು ತೂರಾಟವೂ ನಡೆಯಿತು.


ಹಿಂದೂ ಸಮಾಜವು ತಮ್ಮ ದೇಶದಲ್ಲಿ ತಮ್ಮದೇವತೆಗಳ ಮೆರವಣಿಗೆ ಯನ್ನು ನಡೆಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಕರ್ನಾಟಕದಲ್ಲಿ ಹಿಜಾಬ್ ವಿವಾದದ ಸಂದರ್ಭದಲ್ಲೂ ಭಜರಂಗದಳದ ಕಾರ್ಯಕರ್ತ ಹರ್ಷ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಆ ಸಮಯದಲ್ಲಿ ಹಿಂದೂಗಳ ಮೇಲೆ ಹಲವೆಡೆ ದಾಳಿಗಳು ನಡೆದವು.
ಇತ್ತೀಚೆಗೆ ನೂಪುರ್ ಶರ್ಮಾ ಮತ್ತು ನವೀನ್ ಜಿಂದಾಲ್ ಅವರ ಹೇಳಿಕೆಗಳ ಮೇಲೆ ಕಳೆದ ಎರಡು ಶುಕ್ರವಾರದಂದು ಪ್ರಾರ್ಥನೆಯ ನಂತರ ಮಸೀದಿಗಳಿಂದ ಹೊರಬಂದ ಗಲಭೆಕೋರರು ಹಿಂದೂ ಮನೆಗಳು, ಅಂಗಡಿಗಳು, ವಾಹನಗಳಿಗೆ ದಾಳಿಮಾಡಿ ಬೆಂಕಿ ಹಚ್ಚಿ ಗಲಭೆ ನಡೆಸಿದ್ದಾರೆ. ಸರ್ಕಾರಿ ಆಸ್ತಿ, ದೇವಸ್ಥಾನಗಳಿಗೂ ಅಪಾರ ಹಾನಿ ಮಾಡಿದ್ದಾರೆ. ಪೊಲೀಸರ ಮೇಲೂ ದಾಳಿ ಮಾಡಿದ್ದು ಅಶಾಂತಿ ಉಂಟು ಮಾಡಿದ್ದಾರೆ.


ಕೋಮು ದ್ವೇಷ ಹರಡುವ ಹೇಳಿಕೆಗಳನ್ನು ನೀಡಲಾಗಿದ್ದರೂ ದೇಶದ ಹಲವು ಜಾತ್ಯತೀತ ಪಕ್ಷಗಳು ಮೌನವಹಿಸಿವೆ. ಈ ಘಟನೆಯಿಂದಾಗಿ ದೇಶದಲ್ಲಿರುವ ಸಮಸ್ತ ಹಿಂದೂ ಸಮಾಜಕ್ಕೆ ನೋವಾಗಿದೆ ಮತ್ತುಆಕ್ರೋಶಭರಿತರಾಗಿದ್ದಾರೆ. ದೇಶದಾದ್ಯಂತ ಹಿಂದೂ ಸಮಾಜವು ಈ ಘಟನೆಗಳ ವಿರುದ್ಧಧರಣಿ ಮತ್ತು ಜ್ಞಾಪಕ ಪತ್ರದ ಮೂಲಕ ತನ್ನ ಆಕ್ರೋಶವನ್ನು ವ್ಯಕ್ತಪಡಿಸಿದೆ. ದೇಶದಲ್ಲಿ ಹಿಂಸಚಾರ ಸೃಷ್ಟಿಸಿ ಅಶಾಂತಿಗೆ ಕಾರಣವಾಗಿ ರುವ ಗಲಭೆಕೋರರನ್ನು ಗುರುತಿಸಿ ಅವರ ವಿರುದ್ಧ ರಾಷ್ಟ್ರೀಯ ಸುರಕ್ಷತಾ ಕಾಯಿದೆ ಅಡಿಯಲ್ಲಿ ಕ್ರಮ ತೆಗೆದುಕೊಳ್ಳಬೇಕು. ಅವರಿಗೆ ಪ್ರಚೋದಿಸುವ ಮುಸ್ಲಿಂ ಸಮುದಾಯದ ಧರ್ಮಗುರುಗಳು ಮತ್ತು ಇತರ ಜಾತ್ಯತೀತ ನಾಯಕರ ಮೇಲೆ ರಾಷ್ಟ್ರೀಯ ಸುರಕ್ಷತಾ ಕಾಯಿದೆ ಅಡಿಯಲ್ಲಿ ಕ್ರಮ ತೆಗೆದುಕೊಂಡು ಅಂತಹ ವ್ಯಕ್ತಿಗಳನ್ನು ಗಡಿಪಾರು ಮಾಡಬೇಕು.


ಜೂನ್.17 ರಂದು ಶುಕ್ರವಾರದ ಪ್ರಾರ್ಥನೆಯ ನಂತರ ಹೊರಬರುವ ಜನಸಮೂಹವನ್ನು ಮೇಲ್ವಿಚಾರಣೆ ಮಾಡಬೇಕು ಮತ್ತು ಪ್ರಚೋದನೆ ನೀಡುವ ಭಾಷಣಗಳಿಗೆ ಅವಕಾಶ ಮಾಡಿಕೊಡ ಬಾರದು. ಬೆದರಿಕೆಗೆ ಒಳಗಾದವರಿಗೆ ಭದ್ರತೆಯನ್ನು ಒದಗಿಸಬೇಕು ಮತ್ತು ಬೆದರಿಕೆ ನೀಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಕೋಮುದ್ವೇಷ ಹರಡುವ ಗಲಭೆಗೆ ಪ್ರಚೋದನೆ ನೀಡುವ ಮಸೀದಿ ಮದರಸಗಳನ್ನು ಎನ್.ಐ.ಎ ತನಿಖೆಗೆ ಒಳಪಡಿಸಬೇಕು. ಇಸ್ಲಾಮಿಕ್ ಜಿಹಾದಿ ಮತಾಂಧತೆಯನ್ನು ಹರಡುವ ಮೂಲಕ ದೇಶದಲ್ಲಿ ಹಿಂಸಾಚಾರವನ್ನು ಹರಡುತ್ತಿರುವ ಜಮಿಯತ್ ಉಲೇಮಾ-ಎ-ಹಿಂದ್ ಪಾಪ್ಯುಲರ್ ಫ್ರೆಂಟ್ ಆಫ್ ಇಂಡಿಯಾ, ತಲ್ಲೀಘಿ ಜಮಾತ್ನಂತಹ ಮೂಲಭೂತವಾದಿ ಸಂಘಟನೆಗಳ ಮೇಲೆ ತಕ್ಷಣವೇ ನಿಷೇಧ ಹೇರಬೇಕು.


ಹಿಂದೂಗಳು ಅಲ್ಪಸಂಖ್ಯಾತರಾಗಿರುವ ಸ್ಥಳಗಳಲ್ಲಿ ಹಿಂದುಗಳಿಗೆ ಭದ್ರತೆಗೆ ವ್ಯವಸ್ಥೆಗಳನ್ನು ಮಾಡಬೇಕು ಮತ್ತು ಕಡ್ಡಾಯವಾಗಿ ಪೊಲೀಸರನ್ನು ನಿಯೋಜಿಸಿಬೇಕು ಮತ್ತು ಯೋಜಿಸಲಾದ ಭದ್ರತಾ ಸಿಬ್ಬಂದಿಗೆ ಸಾಕಷ್ಟು ಸೌಲಭ್ಯಗಳು ಮತ್ತು ಹಕ್ಕುಗಳನ್ನು ನೀಡಬೇಕು.ಮೇಲಿನ ಬೇಡಿಕೆಗಳ ಕುರಿತು ನೀವು ಶೀಘ್ರದಲ್ಲಿ ಕ್ರಮಕೈಗೊಳ್ಳಬೇಕೆಂದು ಭಾರತದ ಹಿಂದೂ ಸಮಾಜದ ಪರವಾಗಿ ವಿಶ್ವ ಹಿಂದೂ ಪರಿಷತ್ ಆಗ್ರಹಿಸುತ್ತದೆ ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.


ಈ ಸಂದರ್ಭದಲ್ಲಿ ಸಂಘಟನೆಯ ಅಧ್ಯಕ್ಷ ಸೋಮಶೇಖರ ಪೈಕ, ಸಂಚಾಲಕ ಲತೀಶ್ ಗುಂಡ್ಯ, ಕಾರ್ಯದರ್ಶಿ ರಂಜಿತ್ ಪಿ, ಕೇಶವ ಮಾಸ್ತರ್ ಸೇರಿದಂತೆಹಲವಾರು ಮಂದಿ ಕಾರ್ಯಕರ್ತರು ಜತೆಯಲ್ಲಿದ್ದರು.

- Advertisement -

Latest News

error: Content is protected !!