Saturday, June 6, 2026
Homeತಾಜಾ ಸುದ್ದಿದೇವರ ಮೊರೆ ಹೋದ ನಟಿ, ನಿರೂಪಕಿ ಅನುಶ್ರೀ, ನಿಮಿಷಾಂಭ ದೇಗುಲಕ್ಕೆ ಭೇಟಿ

ದೇವರ ಮೊರೆ ಹೋದ ನಟಿ, ನಿರೂಪಕಿ ಅನುಶ್ರೀ, ನಿಮಿಷಾಂಭ ದೇಗುಲಕ್ಕೆ ಭೇಟಿ

- Advertisement -
- Advertisement -

ಮಂಡ್ಯ : ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಸಿಬಿ ಅಧಿಕಾರಿಗಳು ನಟಿ, ನಿರೂಪಕಿ ಅನುಶ್ರೀ ಅವರನ್ನು ವಿಚಾರಣೆ ನಡೆಸಿದ್ದಾರೆ. ಇದರ ಬೆನ್ನಲ್ಲೇ ಇದೀಗ ಆ್ಯಂಕರ್ ಅನುಶ್ರೀ ನಿಮಿಷಾಂಭ ದೇಗುಲಕ್ಕೆ ಭೇಟಿ ನೀಡಿದ್ದಾರೆ.

ಮಂಡ್ಯ ಜಿಲ್ಲೆಯಲ್ಲಿರುವ ನಿಮಿಷಾಂಬ ದೇಗುಲಕ್ಕೆ ಇಂದು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಶ್ರೀರಂಗಪಟ್ಟಣದ ಗಂಜಾಮ್ ನಲ್ಲಿರುವ ಪ್ರಸಿದ್ಧ ನಿಮಿಷಾಂಬ ದೇವಾಲಯಕ್ಕೆ ಭೇಟಿ ನೀಡಿದ ಅನುಶ್ರೀ, ವಿಶೇಷ ಹರಕೆ ಹೊತ್ತು, ಪೂಜೆ ಸಲ್ಲಿಸಿದ್ದಾರೆ.

ಡ್ರಗ್ಸ್ ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು ಅನುಶ್ರೀ ಅವರನ್ನು ಇತ್ತೀಚೆಗೆ ವಿಚಾರಣೆಗೆ ಒಳಪಡಿಸಿದ್ದರು. ಇದರ ಬೆನ್ನಲ್ಲೇ ಇದೀಗ ಅನುಶ್ರೀ ಡ್ರಗ್ಸ್ ಸಂಕಷ್ಟದಿಂದ ಪಾರಾಗಲು ತನ್ನ ಕುಟುಂಬದವರು ಹಾಗೂ ಸ್ನೇಹಿತರ ಜೊತೆ ನಿಮಿಷಾಂಬ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.

- Advertisement -

Latest News

error: Content is protected !!