Thursday, June 4, 2026
Homeತಾಜಾ ಸುದ್ದಿಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಕೊರೋನಾ ಪಾಸಿಟಿವ್!..

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಕೊರೋನಾ ಪಾಸಿಟಿವ್!..

- Advertisement -
- Advertisement -

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಪತ್ನಿ ಮೆಲಾನಿಯಾ ಟ್ರಂಪ್‌ಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಖುದ್ದಾಗಿ ಡೊನಾಲ್ಡ್ ಟ್ರಂಪ್ ಅವರೇ ಟ್ವಿಟ್ಟರ್ ನಲ್ಲಿ ಈ ಮಾಹಿತಿ ಹಂಚಿಕೊಂಡಿದ್ದಾರೆ. ಶುಕ್ರವಾರ ಸೋಂಕು ತಗುಲಿರುವುದು ದೃಢಪಟ್ಟಿದೆ. ಅವರ ಆಪ್ತ ಸಹಾಯಕರಿಗೆ ಕೊರೊನಾ ಸೋಂಖು ತಗುಲಿದ್ದ ಕಾರಣ ಟ್ರಂಪ್ ಹಾಗೂ ಮೆನಾಲಿಯಾ ಟ್ರಂಪ್ ಕ್ವಾರಂಟೈನ್‌ಗೆ ಒಳಗಾಗುವುದಾಗಿ ತಿಳಿಸಿದ್ದರು. ಬಳಿಕ ಅವರನ್ನು ಪರೀಕ್ಷೆ ಮಾಡಲಾಗಿದ್ದು, ಇಬ್ಬರಿಗೂ ಪಾಸಿಟಿವ್ ಬಂದಿದೆ.

ಟ್ರಂಪ್ ಆಪ್ತ ಸಹಾಯಕರು ಟ್ರಂಪ್ ಪರವಾಗಿ ಸಾಕಷ್ಟು ಚುನಾವಣಾ ಮೆರವಣಿಗೆಗಳಲ್ಲಿ ಪಾಲ್ಗೊಂಡಿದ್ದರು, ಹಾಗೆಯೇ ಟ್ರಂಪ್ ಕೂಡ ಹಲವು ಕಡೆ ಪ್ರಚಾರಕ್ಕೆ ತೆರಳಿದ್ದರು. ಹೆಲಿಕಾಪ್ಟರ್‌ನಲ್ಲಿ ಕೂಡ ಹಲವೆಡೆ ಪ್ರಯಾಣ ಬೆಳೆಸಿದ್ದರು. ಶ್ವೇತಭವನದ ಹಲವು ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದೆ.ಅಮೆರಿಕ ಅಧ್ಯಕ್ಷೀಯ ಚುನಾವಣೆಗೂ ಮೊದಲು ಕೊರೊನಾ ಲಸಿಕೆ ಸಿಗುವುದಾಗಿ ಡೊನಾಲ್ಡ್ ಟ್ರಂಪ್ ಹೇಳಿದ್ದರು, ಅಷ್ಟೇ ಅಲ್ಲದೆ ಲಸಿಕೆ ಕೊಳ್ಳಲು ಹಣವನ್ನೂ ಮೀಸಲಿಟ್ಟಿದ್ದರು.

- Advertisement -

Latest News

error: Content is protected !!