Friday, May 17, 2024
Homeತಾಜಾ ಸುದ್ದಿಆತ “ಯೋಗಿನೋ ರೋಗಿನೋ” ಗೊತ್ತಿಲ್ಲ; ಇನ್ನು ಕಟೀಲ್ ಯಕಶ್ಚಿತ್ ರಾಜಕಾರಣಿ- ಸಿದ್ದರಾಮಯ್ಯ ಗರಂ

ಆತ “ಯೋಗಿನೋ ರೋಗಿನೋ” ಗೊತ್ತಿಲ್ಲ; ಇನ್ನು ಕಟೀಲ್ ಯಕಶ್ಚಿತ್ ರಾಜಕಾರಣಿ- ಸಿದ್ದರಾಮಯ್ಯ ಗರಂ

spot_img
- Advertisement -
- Advertisement -

ಬೆಳಗಾವಿ: ಉತ್ತರಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಇದಕ್ಕೆ ನೇರ ಹೊಣೆ. ಅಲ್ಲಿ ಜಂಗಲ್ ರಾಜ್ಯವಿದೆ. ಪೊಲೀಸರು ಸರ್ವಾಧಿಕಾರಿ ರೀತಿಯಲ್ಲಿ ವರ್ತನೆ ಮಾಡುತ್ತಿದ್ದಾರೆ ಎಂದು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಬೆಳಗಾವಿ ವಿಮಾನ ನಿಲ್ದಾಣ ದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಂತ್ರಸ್ತ ಹೆಣ್ಣು ಮಗಳ ಮನೆಗೆ ಸಾಂತ್ವನ ಹೇಳಲು ಹೋಗುತ್ತಿದ್ದ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿಗೆ ಪೊಲೀಸರು ಬಿಡಲಿಲ್ಲ.ಈ ದೇಶದಲ್ಲಿ ಸರ್ವಾಧಿಕಾರವಿದೆ. ಮುಖ್ಯಮಂತ್ರಿ ಸೂಚನೆಯಂತೆ ಪೊಲೀಸರು ರಾಹುಲ್ ಗಾಂಧಿಯವರನ್ನು ತಡೆದ್ದಾರೆ, ಎಂದರು.

ಯೋಗಿ ಆದಿತ್ಯನಾಥ್ ಗೆ ಸಿಎಂ ಆಗಿ ಮುಂದುವರೆಯಲು ಯಾವುದೇ ನೈತಿಕ ಹಕ್ಕಿಲ್ಲ. ಕೂಡಲೇ ರಾಜೀನಾಮೆ ನೀಡಲಿ. ಆತ “ಯೋಗಿನೋ ರೋಗಿನೋ” ಗೊತ್ತಿಲ್ಲ ಎಂದು ಗರಂ ಆಗಿ ನುಡಿದಿದ್ದಾರೆ. ಕರ್ನಾಟಕದಲ್ಲಿ ನೆರೆ ಸಂತ್ರಸ್ತರಿಗೆ ಮನೆ ಕಟ್ಟಿಕೊಟ್ಟಿಲ್ಲ, ಸರಿಯಾಗಿ ಪರಿಹಾರ ಕೊಟ್ಟಿಲ್ಲ. ಕೋವಿಡ್ ನಿಯಂತ್ರಣ ಹೆಸರಿನಲ್ಲಿ ಭಾರೀ ಭ್ರಷ್ಟಾಚಾರ ಆಗಿದೆ. ವೈದ್ಯಕೀಯ ಸಾಮಾಗ್ರಿಗಳ ಖರೀದಿಯಲ್ಲಿ ಹಗರಣ ಆಗಿದೆ.

ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ ಕಟೀಲ್ ಹೇಳಿಕೆ‌ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ಅವರು ನಳೀನ್ ಕುಮಾರ್ ಕಟೀಲ್ ಯಕಶ್ಚಿತ್ ರಾಜಕಾರಣಿ. ನನ್ನ ಕಾಲದಲ್ಲಿ ಒಂದೇ ಒಂದು ಚೆಕ್ ಬೌನ್ಸ್ ಆಗಿಲ್ಲ. ಇವರ ಕಾಲದಲ್ಲಿ ಸಂಬಳ ಕೊಡಲು ದುಡಿಲ್ಲ ಎಂದು ತಿರುಗೇಟು ನೀಡಿದರು.

- Advertisement -
spot_img

Latest News

error: Content is protected !!