- Advertisement -
![]()
- Advertisement -
ಕಾಸರಗೋಡು: ಡಿವೈಎಫ್‌ಐ ಮಾಜಿ ನೇತಾರೆ, ಅಧ್ಯಾಪಕಿ ಶೇಣಿ ಬಲ್ತಕಲ್ಲು ನಿವಾಸಿ ಸಚಿತಾ ರೈ(27) ಅವರು ಕೇಂದ್ರ-ರಾಜ್ಯ ಸರಕಾರಗಳ ಸಂಸ್ಥೆಗಳಲ್ಲಿ ಉದ್ಯೋಗ ದೊರಕಿಸಿಕೊಡುವ ಭರವಸೆ ನೀಡಿ ಹಲವರಿಂದ ಲಕ್ಷಾಂತರ ರೂ. ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಅವರ ವಿರುದ್ಧ ಬದಿಯಡ್ಕ ಪೊಲೀಸರು ಇನ್ನೊಂದು ಕೇಸು ದಾಖಲಿಸಿದ್ದಾರೆ.
ಪಳ್ಳತ್ತಡ್ಕ ನೆಲ್ಲಿಕಳಯ ನಿವಾಸಿ ಅರವಿಂದಾಕ್ಷನ್ ಅವರ ಪುತ್ರಿ ಅಮೃತಾ (28) ನೀಡಿದ ದೂರಿನಂತೆ ಕೇಸು ದಾಖಲಿಸಲಾಗಿದೆ.
ಅಮೃತಾ ಅವರಿಗೆ ಸಿಪಿಸಿಆರ್‌ಐಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ 12,71,000 ರೂ. ಪಡೆದು ವಂಚಿಸಿದ್ದಾಗಿ ದೂರು ನೀಡಿದ್ದರು. ಇದೀಗ ಈ ಕೇಸು ದಾಖಲಾಗುವುದರೊಂದಿಗೆ ಸಚಿತಾ ರೈ ಮೇಲೆ ವಿವಿಧ ಠಾಣೆಗಳಲ್ಲಿ ಒಟ್ಟು 13 ಪ್ರಕರಣಗಳು ದಾಖಲಾದಂತಾಗಿದೆ.
- Advertisement -


