Friday, June 5, 2026
Homeತಾಜಾ ಸುದ್ದಿಶ್ರೀ ದುರ್ಗಾ ಕಾಳಿ ದೇವಸ್ಥಾನ ಅಂಬರ್ನಾಥ್: ಶ್ರೀ ಬಾಲಗಂಗಾಧರ ಸ್ವಾಮೀಜಿ ನಿಧನ

ಶ್ರೀ ದುರ್ಗಾ ಕಾಳಿ ದೇವಸ್ಥಾನ ಅಂಬರ್ನಾಥ್: ಶ್ರೀ ಬಾಲಗಂಗಾಧರ ಸ್ವಾಮೀಜಿ ನಿಧನ

- Advertisement -
- Advertisement -

ಮುಂಬೈ.ಜೂನ್ 20 : ಮುಂಬೈ ಉಪನಗರದ ಅಂಬರ್ನಾಥ್ ಚಿಂಚ್ ಪಾಡಾ ಶ್ರೀ ದುರ್ಗಾ ಕಾಳಿ ದೇವಸ್ಥಾನದ ಸಂಸ್ಥಾಪಕ ಮತ್ತು ಪೆರ್ಣ ದೊಡ್ಡ ಮನೆಯ ಹಿರಿಯರಾದ ಕಂಬಳ ಪದವು ಶ್ರೀ ಬಾಲಗಂಗಾಧರ ಸ್ವಾಮೀಜಿ ಅವರು ಇಂದು ಹೃದಯಾಘಾತದಿಂದ ನಿಧನರಾದರು .
ತುಳುನಾಡಿನ ದೈವ-ದೇವರುಗಳ, ಶ್ರೀ ದುರ್ಗಾಕಾಳಿಯ ಮತ್ತು ಶ್ರೀ ನಿತ್ಯಾನಂದ ಸ್ವಾಮಿಗಳ ಆರಾಧಕರಾಗಿದ್ದ ಶ್ರೀ ಬಾಲಗಂಗಾಧರ ಸ್ವಾಮೀಜಿಯವರು ಕಳೆದ ಐದು ದಶಕಗಳಿಂದ ಅಂಬರ್ ನಾಥ್ ಚಿಂಚ್ ಪಾಡಾದಲ್ಲಿ ಶ್ರೀ ದುರ್ಗಾ ಕಾಳಿ ದೇವಸ್ಥಾನದ ಮುಖೇನ ಧಾರ್ಮಿಕ ಹಾಗೂ ಸಾಮಾಜಿಕ ಸೇವೆಯೊಂದಿಗೆ ಜನಾನುರಾಗಿಯಾಗಿದ್ದರು.
ಬಂಟ್ವಾಳ ತಾಲೂಕಿನ ಕುರ್ನಾಡು ಕಂಬ್ಳ ಪದವು ಇಲ್ಲಿಯೂ ಶ್ರೀ ದುರ್ಗಾ ಕಾಳಿ ದೇವಸ್ಥಾನವನ್ನು ಸ್ಥಾಪಿಸಿ ಧಾರ್ಮಿಕ ಸೇವೆ ಹಾಗೂ ಅಚರಣೆಗಳನ್ನು ನಡೆಸಿಕೊಂಡು ಬರುತ್ತಿದ್ದರು.

- Advertisement -

Latest News

error: Content is protected !!