Saturday, June 15, 2024
Homeಕರಾವಳಿಉಡುಪಿಕರ್ನಾಟಕದಲ್ಲಿ ಕೊರೊನಾಘಾತ : 24 ಗಂಟೆಗಳಲ್ಲಿ ದಾಖಲೆಯ 416 ಮಂದಿಗೆ ಸೋಂಕು ದೃಢ,...

ಕರ್ನಾಟಕದಲ್ಲಿ ಕೊರೊನಾಘಾತ : 24 ಗಂಟೆಗಳಲ್ಲಿ ದಾಖಲೆಯ 416 ಮಂದಿಗೆ ಸೋಂಕು ದೃಢ, 9 ಜನ ಸಾವು

spot_img
- Advertisement -
- Advertisement -

ಬೆಂಗಳೂರು: ಕರ್ನಾಟಕದಲ್ಲಿ ಕಳೆದ 24 ಗಂಟೆಗಳಲ್ಲಿ 416 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ಧೃಢಪಟ್ಟಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 8697 ಕ್ಕೆ ಏರಿಕೆಯಾಗಿದೆ. ಇಂದು ಕರಾವಳಿ ಜಿಲ್ಲೆಗಳಾದ ಉಡುಪಿಯಲ್ಲಿ 13 ಮತ್ತು ದಕ್ಷಿಣ ಕನ್ನಡ 4 ಹೊಸ ಸೋಂಕು ಪ್ರಕರಣಗಳು ದೃಢ ಪಟ್ಟಿವೆ .
ಇಂದು ಬೆಂಗಳೂರು ನಗರದಲ್ಲಿ 94, ಬೀದರ್ 73, ಬಳ್ಳಾರಿ 38, ರಾಮನಗರ 38, ಮತ್ತು ಕಲಬುರಗಿ ಜಿಲ್ಲೆಯಲ್ಲಿ 34 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.
ಇನ್ನು ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದಾಗಿ 09 ಜನರು ಸಾವನ್ನಪ್ಪಿದ್ದಾರೆ. ಜೊತೆಗೆ ಅನ್ಯ ಕಾರಣದಿಂದಾಗಿ ಸಾವನ್ನಪ್ಪಿದ 4 ಜನರನ್ನು ಸೇರಿಸಿ ಒಟ್ಟು 132 ಸೋಂಕಿತರು ಸಾವನ್ನಪ್ಪಿದ್ದಾರೆ.
ಇಂದು ಒಟ್ಟು 181 ಜನರು ಗುಣಮುಖರಾಗಿದ್ದು. ಈ ಮೂಲಕ ರಾಜ್ಯದಲ್ಲಿ ಗುಣಮುಖರಾದವರ ಸಂಖ್ಯೆ 5391 ಕ್ಕೆ ಏರಿಕೆಯಾಗಿದೆ, 3170 ಆಕ್ಟಿವ್​ ಕೇಸ್​ ಇದೆ ಅಂತಾ ಆರೋಗ್ಯ ಇಲಾಖೆ ತಿಳಿಸಿದೆ.
ಇನ್ನು ಈ 416 ಪ್ರಕರಣಗಳಲ್ಲಿ 116 ಅಂತಾರಾಜ್ಯ ಹಾಗೂ 22 ಅಂತಾರಾಷ್ಟ್ರೀಯ ಪ್ರಯಾಣಿಕರು ಇರೋದಾಗಿ ಮಾಹಿತಿ ಲಭ್ಯವಾಗಿದೆ.

- Advertisement -
spot_img

Latest News

error: Content is protected !!