Friday, June 5, 2026
Homeತಾಜಾ ಸುದ್ದಿಮಾರ್ಚ್ ನಲ್ಲಿ ಅಂಬರೀಷ್ ಸ್ಮಾರಕ ಲೋಕಾರ್ಪಣೆ:ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಗೆ ಅಂಬರೀಷ್ ಹೆಸರು ನಾಮಕರಣ

ಮಾರ್ಚ್ ನಲ್ಲಿ ಅಂಬರೀಷ್ ಸ್ಮಾರಕ ಲೋಕಾರ್ಪಣೆ:ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಗೆ ಅಂಬರೀಷ್ ಹೆಸರು ನಾಮಕರಣ

- Advertisement -
- Advertisement -

ಬೆಂಗಳೂರು: ಅಂಬರೀಷ್ ಸ್ಮಾರಕ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಮಾರ್ಚ್ ತಿಂಗಳಿನಲ್ಲಿ ಲೋಕಾರ್ಪಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹೇಳಿದ್ದಾರೆ.

ಬೆಂಗಳೂರಿನಲ್ಲಿ ರಿಂಗ್ ರಸ್ತೆಗೆ ದಿ. ಪುನೀತ್ ರಾಜ್ ಕುಮಾರ್ ರಸ್ತೆ ಎಂದು ನಾಮಕರಣ ಸಂದರ್ಭದಲ್ಲಿ ಸಿಎಂ ಈ ಹೇಳಿಕೆ ನೀಡಿದ್ದಾರೆ.

ಇದೇ ವೇಳೆ,‌ ನನ್ನ ಆತ್ಮೀಯ ಸ್ನೇಹಿತ ಅಂಬರೀಷ್ ಅವರ ಹೆಸರನ್ನು ಬೆಂಗಳೂರಿನ ರೇಸ್‌ಕೋರ್ಸ್ ರಸ್ತೆಗೆ ಇಡಲು ತೀರ್ಮಾನಿಸಿದ್ದೇನೆ ಎಂದೂ ಬಸವರಾಜ ಬೊಮ್ಮಾಯಿ‌ ಘೋಷಣೆ ಮಾಡಿದ್ದಾರೆ.

ಅವನ ಜೊತೆ ವಾರದಲ್ಲಿ ಏಳೂ ದಿನ ಜೊತೆಗಿರುತ್ತಿದ್ದೆವು. ಅವನು ಕೊಡುಗೈ ದಾನಿ. ಅವನ ಸ್ಮಾರಕ ಮಾಡುವ ಸೌಭಾಗ್ಯ ನನ್ನದು ಎಂದರು ಎಂದು ಸಿಎಂ ಬೊಮ್ಮಾಯಿ‌ ತಿಳಿಸಿದ್ದಾರೆ. ಅಂಬರೀಷ್, ರಾಜಕುಮಾರ್, ವಿಷ್ಣುವರ್ಧನ್, ಶಂಕರನಾಗ್, ಅಪ್ಪು ಇವರೆಲ್ಲರೂ ನಮ್ಮನ್ನು ರಂಜಿಸಲು ಬಂದಿದ್ದರು ಎನಿಸುತ್ತದೆ. ಜೊತೆಗೆ ನಮ್ಮೆಲ್ಲರಿಗೆ ಪ್ರೀತಿ ಬಿಟ್ಟು ಹೋಗಿದ್ದಾರೆ‌ ಎಂದೂ ಇದೇ ವೇಳೆ ಬಸವರಾಜ ಬೊಮ್ಮಾಯಿ‌ ಹೇಳಿದ್ದಾರೆ.

- Advertisement -

Latest News

error: Content is protected !!