Friday, June 5, 2026
Homeಕ್ರೀಡೆಟೀಂ ಇಂಡಿಯಾದ ಆಟಗಾರ ರಿಷಬ್ ಪಂತ್ ಆಸ್ಪತ್ರೆಯಿಂದ ಡಿಸ್ಚಾರ್ಜ್

ಟೀಂ ಇಂಡಿಯಾದ ಆಟಗಾರ ರಿಷಬ್ ಪಂತ್ ಆಸ್ಪತ್ರೆಯಿಂದ ಡಿಸ್ಚಾರ್ಜ್

- Advertisement -
- Advertisement -

ಮುಂಬೈ : ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಟೀಂ ಇಂಡಿಯಾದ ಆಟಗಾರ ರಿಷಬ್ ಪಂತ್ ಆರೋಗ್ಯದಲ್ಲಿ ಸುಧಾರಣೆಯಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ಮನೆಗೆ ಮರಳಿರುವ ಪಂತ್ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಶೇರ್ ಮಾಡುವ ಖುಷಿ ಹಂಚಿಕೊಂಡಿದ್ದಾರೆ.

ಫೋಟೋವನ್ನ ಒಂದನ್ನ ಶೇರ್ ಮಾಡಿರುವ ರಿಷಬ್ ಪಂತ್, ‘ಹೊರಗೆ ಕುಳಿತಾಗ ಮಾತ್ರ ತಾಜಾ ಗಾಳಿಯನ್ನ ಉಸಿರಾಡಲು ಸಾಧ್ಯ, ತುಂಬಾ ಧನ್ಯನಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಅಂದ್ಹಾಗೆ, ಡಿಸೆಂಬರ್ 30 ರಂದು ಭೀಕರ ಅಪಘಾತದಿಂದಾಗಿ ಗಂಭೀರ ಗಾಯಗೊಂಡಿದ್ದ ಅವರನ್ನು ಡೆಹ್ರಾಡೂನ್ ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಏರ್ ಲಿಫ್ಟ್ ಮಾಡಿ ಮುಂಬೈ ನ  ಕೋಕಿಲಾಬೆನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಅವರು ಚೇತರಿಸಿಕೊಂಡಿದ್ದು ಮನೆಗೆ ಮರಳಿದ್ದಾರೆ.

- Advertisement -

Latest News

error: Content is protected !!