Thursday, June 4, 2026
Homeತಾಜಾ ಸುದ್ದಿರೆಬಲ್ ಸ್ಟಾರ್ ಅಂಬರೀಶ್ ಅವರ ನೆಚ್ಚಿನ ನಾಯಿ ಬುಲ್ ಬುಲ್ ಇನ್ನಿಲ್ಲ

ರೆಬಲ್ ಸ್ಟಾರ್ ಅಂಬರೀಶ್ ಅವರ ನೆಚ್ಚಿನ ನಾಯಿ ಬುಲ್ ಬುಲ್ ಇನ್ನಿಲ್ಲ

- Advertisement -
- Advertisement -

ಬೆಂಗಳೂರು; ರೆಬಲ್ ಸ್ಟಾರ್ ಅಂಬರೀಶ್ ಅವರ ನೆಚ್ಚಿನ ನಾಯಿ ಬುಲ್ ಬುಲ್ ನಿಧನ ಹೊಂದಿದೆ. ನಿನ್ನೆ ಬುಲ್ ಬುಲ್ ನಿಧನ ಹೊಂದಿದ್ದು, ತಮ್ಮ ತೋಟದಲ್ಲಿ ಅವುಗಳ ಅಂತ್ಯ ಸಂಸ್ಕಾರ ಮಾಡಲು  ನಿರ್ಧರಿಸಿ ಅದರಂತೆ ಸುಮಲತಾ ಅಂಬರೀಶ್ ಮತ್ತು ಅಭಿಷೇಕ್ ಅಂಬರೀಶ್ ಅಲ್ಲೇ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.

ರೆಬಲ್ ಸ್ಟಾರ್ ಅಂಬರೀಶ್) ಅವರಿಗೆ ಶ್ವಾನಗಳನ್ನು ಕಂಡರೆ ಬಲು ಪ್ರೀತಿ. ಹಾಗಾಗಿ ದೇಶ ವಿದೇಶಗಳಿಂದ ನಾಯಿಗಳನ್ನು ತಂದು ಸಾಕುತ್ತಿದ್ದಾರೆ. ಅದರಲ್ಲೂ ಅವರಿಗೆ ಕನ್ವರ್ ಮತ್ತು ಬುಲ್ ಬುಲ್ ಅಂದರೆ ಹೆಚ್ಚು ಪ್ರಾಣ. ತಾವು ಸಾಕಿದ ಎರಡು ನಾಯಿಗಳಿಗೆ ಅವರು ಕನ್ವರ್ ಮತ್ತು ಬುಲ್ ಬುಲ್ ಎಂದು ಹೆಸರಿಟ್ಟಿದ್ದರು. ಯಾವಾಗಲೂ ಈ ಎರಡೂ ಶ್ವಾನಗಳು ಅಂಬಿ ಸುತ್ತಲೇ ಗಿರಕಿ ಹೊಡೆಯುತ್ತಿದ್ದವು.

ಅಂಬರೀಶ್ ನಿಧನರಾದಾಗ ಕನ್ವರ್ ಹೆಸರಿನ ಶ್ವಾನ ಊಟವನ್ನೇ ಬಿಟ್ಟಿತ್ತು. ತನ್ನ ಸಾಕಿದಾತ ಇನ್ನಿಲ್ಲ ಎನ್ನುವುದನ್ನು ಅದರಿಂದ ಅರಗಿಸಿಕೊಳ್ಳಲು ಆಗಲಿಲ್ಲ. ಅಂಬರೀಶ್ ನಿಧನದ ದಿನ ಕನ್ವರ್ ಕೂಡ ಕಣ್ಣೀರಿಟ್ಟಿತ್ತು. ಊಟ ಬಿಟ್ಟು ಮಂಕಾಗಿತ್ತು. ಹಾಗಾಗಿ ಅದು ತುಂಬಾ ದಿನ ಬದುಕುಳಿಯಲಿಲ್ಲ. ಊಟ ಬಿಟ್ಟು, ಸರಿಯಾಗಿ ನಿದ್ದೆ ಕೂಡ ಮಾಡದೇ ಬಳಲಿ 24 ಮೇ 2021ರಲ್ಲಿ ಅಂಬಿ ಹುಡುಕಿಕೊಂಡು ಹೊರಟೇ ಬಿಟ್ಟಿತ್ತು.  ಇದೀಗ ಬುಲ್ ಬುಲ್ ಕೂಡ ಅದೇ ಹಾದಿಯಲ್ಲಿ ಸಾಗಿದೆ.

- Advertisement -

Latest News

error: Content is protected !!