Thursday, June 4, 2026
Homeಕರಾವಳಿಉಡುಪಿಉಡುಪಿ :ಬೈಂದೂರಿನಲ್ಲಿ ಲಾರಿ ಟಯರ್ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಕಳ್ಳರು ಅರೆಸ್ಟ್

ಉಡುಪಿ :ಬೈಂದೂರಿನಲ್ಲಿ ಲಾರಿ ಟಯರ್ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಕಳ್ಳರು ಅರೆಸ್ಟ್

- Advertisement -
- Advertisement -

ಉಡುಪಿ: ಲಾರಿ ಟಯರ್ ಕಳ್ಳತನ ಮಾಡಿದ್ದ ಅಂತರ್ ರಾಜ್ಯ ಕಳ್ಳರನ್ನು ಬೈಂದೂರು ಪೊಲೀಸರು ‌ಬಂಧಿಸಿದ್ದಾರೆ. ಮಹಾರಾಷ್ಟ್ರ ಮೂಲದ ಶ್ಯಾಮ ಶಂಕರ್ (24) ಆಕಾಶ್ ಶಿಂಧೆ (19) ಮತ್ತು ಅಮೂಲ್ ರಾಮ ಕಳೆ (22) ಬಂಧಿತ ಆರೋಪಿಗಳಾಗಿದ್ದಾರೆ.

ಎರಡು ದಿನಗಳ ಹಿಂದೆ ರಾತ್ರಿ ಅಂಕೋಲಾ ಮೂಲದ ಪುರುಷೋತ್ತಮ ಎಂಬವರು ತಮ್ಮ ಹೊಸ ಲಾರಿಯನ್ನು ಟೋಲ್ ಬಳಿ ನಿಲ್ಲಿಸಿ ವಿಶ್ರಾಂತಿಗೆ ಜಾರಿದ್ದರು. ಈ ವೇಳೆ ಮಂಪರು ಬರಿಸುವ ಸ್ಪ್ರೇ ಹೊಡೆದು ಲಾರಿಯ ಐದು ಟಯರ್ ಗಳನ್ನು ಕಳವು ಮಾಡಲಾಗಿತ್ತು

ಸಿಸಿ ಕ್ಯಾಮೆರಾ ನೆರವಿನಿಂದ ಮೂಲಕ ಕಳ್ಳರನ್ನು ಪತ್ತೆ ಹಚ್ಚಿದ ಪೊಲೀಸರು, ಬೈಂದೂರು ತಾಲೂಕಿನ ಒತ್ತಿನೆಣೆ ಬಳಿ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಈ ವೇಳೆ ಆರೋಪಿಗಳಿಂದ ಕಳ್ಳತನ ಮಾಡಿದ ಐದು ಟಯರ್ ಗಳು ಹಾಗೂ ಕಳ್ಳತನಕ್ಕೆ ಬಳಸಿದ ಇನ್ನೊಂದು ಲಾರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

- Advertisement -

Latest News

error: Content is protected !!