Tuesday, June 30, 2026
Homeಕರಾವಳಿಆಳ್ವಾಸ್ ಕಾಲೇಜಿನ ವೈಟ್ ಲಿಫ್ಟಿಂಗ್ ಕೋಚ್ ರಾಜೇಂದ್ರ ಪ್ರಸಾದ್ ನಿಧನ

ಆಳ್ವಾಸ್ ಕಾಲೇಜಿನ ವೈಟ್ ಲಿಫ್ಟಿಂಗ್ ಕೋಚ್ ರಾಜೇಂದ್ರ ಪ್ರಸಾದ್ ನಿಧನ

- Advertisement -
- Advertisement -

ಪುತ್ತೂರು; ಆಳ್ವಾಸ್ ಕಾಲೇಜಿನ ವೈಟ್ ಲಿಫ್ಟಿಂಗ್ ಕೋಚ್ ರಾಜೇಂದ್ರ ಪ್ರಸಾದ್ (42) ಹೃದಯಾಘಾತದಿಂದ ಪುತ್ತೂರಿನಲ್ಲಿ ಇಂದು ನಿಧನರಾಗಿದ್ದಾರೆ.

ಮೂಲತಃ ಸುಳ್ಯಪದವಿನವರಾದ  ರಾಜೇಂದ್ರ ಪ್ರಸಾದ್ ಪುತ್ತೂರಿನ ಪಡೀಲ್ ನಲ್ಲಿ ವಾಸವಿದ್ದರು. ಇಂದು ಬೆಳಗ್ಗೆ ಮನೆಯಲ್ಲಿದ್ದ ವೇಳೆ ಎದೆ ನೋವು ಕಾಣಿಸಿಕೊಂಡಿದ್ದು, ಈ ಸ್ವತಃ ತಮ್ಮ ಕಾರಿನ್ನು ತಾವೇ ಡ್ರೈವ್ ಮಾಡಿಕೊಂಡು ಮಗಳನ್ನು ಶಾಲೆಗೆ ಬಿಟ್ಟು ಬಳಿಕ ಚಿಕಿತ್ಸೆಗೆಂದು ಖಾಸಗಿ ಆಸ್ಪತ್ರೆಗೆ ಬಂದಿದ್ದರು. ಆದರೆ ಅಲ್ಲಿ ಇಸಿಜಿ ತೆಗೆಯುವ ಮೊದಲೇ ಸಾವನ್ನಪ್ಪಿದ್ದಾರೆ.

ಇನ್ನು ಮೃತ ರಾಜೇಂದ್ರ ಪ್ರಸಾದ್ ರವರು ಪ್ರಸ್ತುತ ಮೂಡಬಿದ್ರೆ ಆಳ್ವಾಸ್ ಕಾಲೇಜಿನಲ್ಲಿ ವೈಟ್ ಲಿಪ್ಟಿಂಗ್ ತರಬೇತುದಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಉಜಿರೆ ಎಸ್.ಡಿ.ಎಂ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮುಖ್ಯ ಕೋಚ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ರಾಜೇಂದ್ರ ಪ್ರಸಾದ್ ರವರ ಗರಡಿಯಲ್ಲಿ ನಾಲ್ಕು ಮಂದಿ ಅಂತರ್ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಮೃತರು ಪತ್ನಿ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಅಂತಿಮ ದರ್ಶನಕ್ಕೆ ಜಿಲ್ಲೆ ಹೊರ ಜಿಲ್ಲೆಗಳಿಂದ ದೈಹಿಕ ಶಿಕ್ಷಣ ನಿರ್ದೇಶಕರುಗಳು ಹಾಗೂ ವಿದ್ಯಾರ್ಥಿಗಳು ಪುತ್ತೂರಿನ ಪಡೀಲು ನಿವಾಸಕ್ಕೆ ಆಗಮಿಸಿ ಅಂತಿಮ ದರ್ಶನ ಪಡೆದರು.

- Advertisement -

Latest News

error: Content is protected !!