Tuesday, April 23, 2024
Homeತಾಜಾ ಸುದ್ದಿಆಲ್ಟ್ ನ್ಯೂಸ್ ಸಂಸ್ಥಾಪಕ ಮೊಹಮ್ಮದ್ ಜುಬೇರ್‌ಗೆ ಜಾಮೀನು ನಿರಾಕರಣೆ: ಪಾಕಿಸ್ತಾನ, ಸಿರಿಯಾ ಸೇರಿದಂತೆ ಅನೇಕ ದೇಶಗಳಿಂದ...

ಆಲ್ಟ್ ನ್ಯೂಸ್ ಸಂಸ್ಥಾಪಕ ಮೊಹಮ್ಮದ್ ಜುಬೇರ್‌ಗೆ ಜಾಮೀನು ನಿರಾಕರಣೆ: ಪಾಕಿಸ್ತಾನ, ಸಿರಿಯಾ ಸೇರಿದಂತೆ ಅನೇಕ ದೇಶಗಳಿಂದ ಆಲ್ಟ್ ನ್ಯೂಸ್‌ಗೆ ದೇಣಿಗೆ

spot_img
- Advertisement -
- Advertisement -

2018ರಲ್ಲಿ ಮಾಡಿದ್ದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಟ್ವೀಟ್‌ಗೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿರುವ ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮೊಹಮ್ಮದ್ ಜುಬೇರ್‌ಗೆ ದಿಲ್ಲಿ ನ್ಯಾಯಾಲಯ ಜಾಮೀನು ನಿರಾಕರಿಸಿದೆ. ಜುಬೇರ್ ಕಂಪೆನಿಯು ಪಾಕಿಸ್ತಾನ, ಸಿರಿಯಾ ಮತ್ತು ಇತರೆ ಗಲ್ಫ್ ದೇಶಗಳಿಂದ ದೇಣಿಗೆಗಳನ್ನು ಸ್ವೀಕರಿಸಿದೆ ಎಂದು ದಿಲ್ಲಿ ಪೊಲೀಸರು ಶನಿವಾರ ಆರೋಪಿಸಿದ್ದಾರೆ.

ಆಲ್ಟ್ ನ್ಯೂಸ್‌ನ ಪೋಷಕ ಕಂಪೆನಿಯಾಗಿರುವ ಪ್ರವ್ಡಾ ಮೀಡಿಯಾ, ವಿವಿಧ ವರ್ಗಾವಣೆಗಳ ಮೂಲಕ 2 ಲಕ್ಷ ರೂಪಾಯಿಗೂ ಅಧಿಕ ಹಣವನ್ನು ಪಡೆದುಕೊಂಡಿದೆ. ಅದು ರವಾನೆಯಾಗಿರುವ ಮೊಬೈಲ್ ಫೋನ್ ಸಂಖ್ಯೆ ಅಥವಾ ಐಪಿ ವಿಳಾಸ ವಿದೇಶಗಳದ್ದಾಗಿವೆ. ಜುಬೇರ್ ಅವರು ಪ್ರವ್ಡಾ ಮೀಡಿಯಾದ ನಿರ್ದೇಶಕ ಕೂಡ ಹೌದು ಎಂದು ಪೊಲೀಸರು ತಿಳಿಸಿದ್ದಾರೆ.

ಪಾಕಿಸ್ತಾನ, ಸಿರಿಯಾಗಳಿಂದಲೂ ದೇಣಿಗೆ ಬಂದಿದೆ. ಹೀಗಾಗಿ ಇದರ ಗಂಭೀರತೆಯನ್ನು ಪರಿಗಣಿಸಿದಾಗ, ಇದನ್ನು ಕೇವಲ ಸರಳ ಟ್ವೀಟ್ ಪ್ರಕರಣವಾಗಿಲ್ಲ. ಆರೋಪಿಯು ಪ್ರವ್ಡಾ ಮೀಡಿಯಾ ನಿರ್ದೇಶಕ, ಅವರು ಜಾಣ್ಮೆಯಿಂದ ಎಲ್ಲವನ್ನೂ ಡಿಲೀಟ್ ಮಾಡಿದ್ದಾರೆ” ಎಂದು ದಿಲ್ಲಿ ಪೊಲೀಸರು ಹೇಳಿದ್ದಾರೆ.

ಈ ಅಂಶಗಳನ್ನು ಪರಿಗಣಿಸಿ, ಜುಬೇರ್‌ಗೆ ಯಾವುದೇ ಸಂದರ್ಭದಲ್ಲಿಯೂ ಜಾಮೀನು ನೀಡಬಾರದು ಎಂದು ಪೊಲೀಸರು ವಾದಿಸಿದ್ದರು. ಜುಬೇರ್ ಜಾಮೀನು ಮನವಿ ತಿರಸ್ಕರಿಸಿದ ದಿಲ್ಲಿ ನ್ಯಾಯಾಲಯ, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಬ್ಯಾಂಕಾಕ್, ಆಸ್ಟ್ರೇಲಿಯಾ, ನಾರ್ಥ್ ಹಾಲಾಂಡ್, ಸಿಂಗಪುರ, ವಿಕ್ಟೋರಿಯಾ, ನ್ಯೂಯಾರ್ಕ್, ಇಂಗ್ಲೆಂಡ್, ರಿಯಾದ್ ಪ್ರದೇಶ, ಶಾರ್ಜಾ, ಸ್ಟಾಕ್‌ಹೋಮ್, ಅಬುದಾಬಿ, ವಾಷಿಂಗ್ಟನ್, ಕನ್ಸಾಸ್, ನ್ಯೂಜೆರ್ಸಿ, ಒಂಟಾರಿಯೋ, ಕ್ಯಾಲಿಫೋರ್ನಿಯಾ, ಟೆಕ್ಸಾಸ್, ಲೋವರ್ ಸಾಕ್ಸೋನಿ, ಬೆರ್ನ್, ದುಬೈ, ಸ್ಕಾಟ್ಲೆಂಡ್ ಸೇರಿದಂತೆ ವಿದೇಶಗಳು ಮತ್ತು ನಗರಗಳಿಂದ ಹಲವು ಹಣ ವರ್ಗಾವಣೆಗಳು ನಡೆದಿವೆ. ಇವುಗಳ ಮೊಬೈಲ್ ಫೋನ್ ಸಂಖ್ಯೆ ಅಥವಾ ಐಪಿ ವಿಳಾಸ ಭಾರತದ ಹೊರಗೆ ಇರುವುದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವರ್ಗಾವಣೆಗಳ ಮೂಲಕ ಪ್ರವ್ಡಾ ಮೀಡಿಯಾ 2,31,933 ರೂಪಾಯಿ ಒಟ್ಟು ದೇಣಿಗೆ ಪಡೆದುಕೊಂಡಿದೆ ಎಂದು ಮಾಹಿತಿ ನೀಡಿದ್ದಾರೆ. ಪ್ರಕರಣವು ತನಿಖೆಯ ಆರಂಭದ ಹಂತದಲ್ಲಿ ಇರುವುದರಿಂದ ಮತ್ತು ಈ ಪ್ರಕರಣದ ಒಟ್ಟಾರೆ ವಾಸ್ತವಾಂಶಗಳು ಹಾಗೂ ಸಂದರ್ಭಗಳು ಮತ್ತು ಆರೋಪಿ ವಿರುದ್ಧ ಮಾಡಲಾಗಿರುವ ಆರೋಪಗಳ ಸ್ವಭಾವ ಹಾಗೂ ಗಂಭೀರತೆಯನ್ನು ಪರಿಗಣಿಸಿದಾಗ ಜಾಮೀನು ಮಂಜೂರು ಮಾಡಲು ಯಾವುದೇ ಪೂರಕ ಅಂಶಗಳಿಲ್ಲ. ಹೀಗಾಗಿ ಆರೋಪಿಯ ಜಾಮೀನು ಅರ್ಜಿಯನ್ನು ತಿರಸ್ಕರಿಸಲಾಗಿದೆ” ಎಂದು ದಿಲ್ಲಿ ನ್ಯಾಯಾಲಯ ಹೇಳಿದೆ.

- Advertisement -
spot_img

Latest News

error: Content is protected !!