Thursday, June 4, 2026
Homeಕರಾವಳಿಕೇರಳದಲ್ಲಿ ಜೆಎನ್ 1 ಗೆ ಇಬ್ಬರ ಸಾವು;ದ.ಕ. ಜಿಲ್ಲೆಯ ಗಡಿಗಳಲ್ಲಿ ಹೆಚ್ಚಿದ ಆತಂಕ

ಕೇರಳದಲ್ಲಿ ಜೆಎನ್ 1 ಗೆ ಇಬ್ಬರ ಸಾವು;ದ.ಕ. ಜಿಲ್ಲೆಯ ಗಡಿಗಳಲ್ಲಿ ಹೆಚ್ಚಿದ ಆತಂಕ

- Advertisement -
- Advertisement -

ಮಂಗಳೂರು: ಕೇರಳದಲ್ಲಿ ಕೊರೋನಾ ಜೆಎನ್ 1 ಭೀತಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗಗಳಲ್ಲಿ ಆತಂಕ ಕಾಣಿಸಿಕೊಂಡಿದೆ.

ಕರ್ನಾಟಕ ಮತ್ತು ಕೇರಳ ರಾಜ್ಯಗಳ ನಡುವೆ ದಕ್ಷಿಣ ಕನ್ನಡ ಜಿಲ್ಲೆಗೆ ಹೊಂದಿಕೊಂಡಂತೆ 18ಕ್ಕೂ ಹೆಚ್ಚು ಗಡಿ ಪ್ರದೇಶಗಳಿವೆ

ಉಳ್ಳಾಲ ತಾಲೂಕಿನ ತಲಪಾಡಿ, ಸುಳ್ಯ ತಾಲೂಕಿನ ಜಾಲ್ಸೂರು, ಬಂಟ್ವಾಳ ತಾಲೂಕಿನ ವಿಟ್ಲ ಸೇರಿದಂತೆ ಸಾಕಷ್ಟು ಗಡಿ ಪ್ರದೇಶಗಳಿದ್ದು, ಕೇರಳ ರಾಜ್ಯದಲ್ಲಿರುವ ಸೋಂಕು ರಾಜ್ಯಕ್ಕೆ ಹರಡುವ ಸಾಧ್ಯತೆಯ ಭೀತಿ ಎದುರಾಗಿದೆ.

ಕೇರಳದಲ್ಲಿ ಈಗಾಗಲೇ ಸೋಂಕಿನಿಂದಾಗಿ ಇಬ್ಬರು ಮೃತಪಟ್ಟಿದ್ದು, ರಾಜ್ಯದಲ್ಲಿ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಸಲುವಾಗಿ ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳ ಸಭೆ ಕರೆದಿದ್ದಾರೆ.

- Advertisement -

Latest News

error: Content is protected !!