Wednesday, June 3, 2026
Homeಕರಾವಳಿಬೆಳ್ತಂಗಡಿ; ಸಾಕು ನಾಯಿಗಳ ಮೇಲೆ ಏಕಾಏಕಿ ದಾಳಿ ನಡೆಸಿದ ಚಿರತೆ

ಬೆಳ್ತಂಗಡಿ; ಸಾಕು ನಾಯಿಗಳ ಮೇಲೆ ಏಕಾಏಕಿ ದಾಳಿ ನಡೆಸಿದ ಚಿರತೆ

- Advertisement -
- Advertisement -

ಬೆಳ್ತಂಗಡಿ; ಸಾಕು ನಾಯಿಗಳ ಮೇಲೆ ಏಕಾಏಕಿ ಚಿರತೆ ದಾಳಿ ನಡೆಸಿದ ಘಟನೆ ಬೆಳ್ತಂಗಡಿ ತಾಲೂಕಿನ ತೋಟತ್ತಾಡಿ ಗ್ರಾಮದ ಕುಂಟಾಡಿ ಎಂಬಲ್ಲಿ ನಡೆದಿದೆ.

ವಿಜು ಅವರ ಮನೆಯಲ್ಲಿ ಒಟ್ಟು ಮೂರು ಸಾಕು ನಾಯಿಗಳಿದ್ದು ಚಿರತೆ ಒಂದು ನಾಯಿಯ ಮೇಲೆ ದಾಳಿ ನಡೆಸಿದಾಗ ಉಳಿದ ಎರಡು ನಾಯಿಗಳು ಚಿರತೆಯ ಮೇಲೆ ದಾಳಿ ಮಾಡಿದ್ದು ಈ ಸಮಯ ಚಿರತೆ ಸ್ಥಳದಿಂದ ಓಡಿಹೋಗಿದೆ.

ಚಿರತೆ ದಾಳಿಗೆ ತುತ್ತಾದ ನಾಯಿ ಜೀವನ್ಮರಣ ಪರಿಸ್ಥಿತಿಯಲ್ಲಿದೆ.ಸ್ಥಳಕ್ಕೆ ಡಿ ಆರ್ ಎಫ್ ಓ ಭವಾನಿ ಶಂಕರ್, ಸಿಬ್ಬಂದಿ ಭೇಟಿ ನೀಡಿದ್ದು, ಚಿರತೆ ಸೆರೆಗೆ ಬೋನು ಇರಿಸಲು ಕ್ರಮ ಕೈಗೊಂಡಿದ್ದಾರೆ.

- Advertisement -

Latest News

error: Content is protected !!