Wednesday, May 8, 2024
Homeಕರಾವಳಿಮಂಗಳೂರು; ವ್ಯಕ್ತಿಯ ಕಳೆದು ಹೋದ ಮೊಬೈಲ್ ಬಳಸಿ ಹಣ ವರ್ಗಾವಣೆ

ಮಂಗಳೂರು; ವ್ಯಕ್ತಿಯ ಕಳೆದು ಹೋದ ಮೊಬೈಲ್ ಬಳಸಿ ಹಣ ವರ್ಗಾವಣೆ

spot_img
- Advertisement -
- Advertisement -

ಮಂಗಳೂರು: ವ್ಯಕ್ತಿಯೊಬ್ಬರ ಕಳೆದು ಹೋಗಿದ್ದ ಮೊಬೈಲ್ ಅನ್ನು ಬಳಸಿ ಫೋನ್ ಪೇ ಮೂಲಕ  ಇನ್ನೋರ್ವ ವ್ಯಕ್ತಿಗೆ ಹಣ ವರ್ಗಾಯಿಸಿ ವಂಚಿಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

ವ್ಯಕ್ತಿಯೊಬ್ಬರು ಡಿ.3ರಂದು ಕಣ್ಣೂರಿಗೆ ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ಎರಡು ಮೊಬೈಲ್‌ ಹ್ಯಾಂಡ್‌ಸೆಟ್‌ಗಳನ್ನು ಕಳೆದುಕೊಂಡಿದ್ದರು. ಈ ಬಗ್ಗೆ ಮರುದಿನ ಕಂಕನಾಡಿ ಠಾಣೆಗೆ ದೂರು ನೀಡಿದ್ದರು.

ದೂರು ನೀಡಿದ ಎರಡು ದಿನಗಳ ಅನಂತರ ಒಂದು ಮೊಬೈಲ್‌ನ ಸಿಮ್‌ ಆನ್‌ ಆಗಿತ್ತು. ಅದಕ್ಕೆ ಸಂಬಂಧಿಕರ ಪೋನ್‌ ಮೂಲಕ ಸಂಪರ್ಕಿಸಿದಾಗ ಕರೆ ಸ್ವೀಕರಿಸಿದ ವ್ಯಕ್ತಿ ಹಿಂದಿ ಭಾಷೆಯಲ್ಲಿ ಮಾತನಾಡಿ ಮಂಗಳೂರಿನ ಪಡೀಲ್‌ನಲ್ಲಿ ಮೊಬೈಲ್‌ ಫೋನ್‌ ಸಿಕ್ಕಿದ್ದು, ತಾನು ಕಡಬದಲ್ಲಿದ್ದೇನೆ ಎಂದು ತಿಳಿಸಿದ್ದಾನೆ.

ಮಾತ್ರವಲ್ಲದೆ ನಾಲ್ಕು ದಿನ ಕಳೆದು ಮಂಗಳೂರಿಗೆ ಬಂದು ಮೊಬೈಲ್‌ ತಂದುಕೊಡುವುದಾಗಿಯೂ ಹೇಳಿದ್ದ. ಆದರೆ ಆತ ತಂದುಕೊಡಲಿಲ್ಲ. ಹಾಗಾಗಿ ದೂರುದಾರರು ಡಿ. 12ರಂದು ತನ್ನ ಹಳೆಯ ನಂಬರ್‌ನ ಮೊಬೈಲ್‌ ಸಿಮ್‌ ಅನ್ನು ಬ್ಲಾಕ್‌ ಮಾಡಿ ಹೊಸ ಸಿಮ್‌ ಖರೀದಿಸಿದ್ದರು

ಆರೋಪಿಗಳು ಡಿ. 12ರಂದು ದೂರುದಾರರ ಮೊಬೈಲ್‌ನ ಫೋನ್‌ ಪೇ ಮೂಲಕ 1.82 ಲ.ರೂ.ಗಳನ್ನು ಬೇರೆ ಬೇರೆ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ. ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

- Advertisement -
spot_img

Latest News

error: Content is protected !!