- Advertisement -
- Advertisement -
ಲಾಕ್ ಡೌನ್ ಕಾರಣದಿಂದ ಎಲ್ಲೆಡೆ ಮದ್ಯದಂಗಡಿಗಳು ಸ್ಥಗಿತಗೊಂಡಿರುವುದರಿಂದ ಬೆಸೆತ್ತ ಇಬ್ಬರು ವ್ಯಕ್ತಿಗಳು ಮನೆಯಲ್ಲಿಯೇ ಶರಾಬು ತಯಾರಿಸಲು ಮುಂದಾಗಿ ಪೊಲೀಸರ ಅತಿಥಿಯಾದ ಘಟನೆ ತಮಿಳುನಾಡಿನ ನಮಕ್ಕಲ್ ಗ್ರಾಮದಲ್ಲಿ ನಡೆದಿದೆ.
ಜನಪ್ರಿಯ ವಿಡಿಯೋ ವೆಬ್ ಸೈಟ್ ಯೂಟ್ಯೂಬ್ ನೋಡಿ ಮದ್ಯ ತಯಾರಿಸುವ ವಿಧಾನವನ್ನು ಕಂಡುಕೊಂಡು ಅಗತ್ಯ ವಸ್ತುಗಳನ್ನು ತರಿಸಿಕೊಂಡಿದ್ದರು. ಮಾತ್ರವಲ್ಲದೆ ಅದರಲ್ಲಿ ಯಶಸ್ವಿಯೂ ಆಗಿದ್ದರು. ಆದರೇ ಇನ್ನೇನು ಕುಡಿಯಬೇಕು ಎನ್ನುವಷ್ಟರಲ್ಲಿ ಪೊಲೀಸರು ಬಂದು ಶುಕ್ರವಾರ ಈ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದಾರೆ.
ಮಾತ್ರವಲ್ಲದೆ ಲಿಕ್ಕರ್ ತಯಾರಿಸಲು ಇರಿಸಿದ್ದ ವಸ್ತುಗಳನ್ನು ಮತ್ತು ಸ್ಥಳದಲ್ಲಿದ್ದ ಕಂಟೇನರ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಅಕ್ರಮ ಮದ್ಯ ತಯಾರಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ತಿಳಿದುಬಂದಿದ್ದು. ಅದ್ದರಿಂದ ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.
- Advertisement -