- Advertisement -
- Advertisement -
ಬಂಟ್ವಾಳ: ಮನೆಯೊಂದರ ಹಿಂಬದಿಯಲ್ಲಿ ನಡೆಯುತ್ತಿದ್ದ ಕಳ್ಳಭಟ್ಟಿ ಅಡ್ಡೆಗೆ ಅಬಕಾರಿ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಿದ ಘಟನೆ ದಕ್ಷಿಣ ಕನ್ನಡದ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದ ಬೆಂಜನಪದವಿನಲ್ಲಿ ನಡೆದಿದೆ.
ಕಿರಣ್‌ಕುಮಾರ್ ಹಾಗೂ ಕ್ರಿಸ್ಟನ್ ಡಿಸೋಜಾ ಬಂಧಿತರು. ಬೆಂಜನಪದವಿನಲ್ಲಿ ಕ್ರಿಸ್ಟನ್ ಡಿಸೋಜಾರ ಮನೆಯ ಹಿಂಭಾಗದಲ್ಲಿ ಈ ಧಂದೆ ನಡೆಯುತ್ತಿತ್ತು. ಖಚಿತ ಮಾಹಿತಿಯ ಆಧಾರದ ಮೇಲೆ ಅಬಕಾರಿ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದು, ಕಳ್ಳಭಟ್ಟಿ ತಯಾರಿ ಸಾಮಾಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ.
ಸ್ಥಳದಲ್ಲಿದ್ದ 1200 ಲೀಟರ್ ಬೆಲ್ಲದ ಕೊಳೆ ಮತ್ತು ಕಳ್ಳಭಟ್ಟಿ ತಯಾರಿಸುವ ಸಾಮಾಗ್ರಿ, 940 ಕೆಜಿ ಬೆಲ್ಲ, 500 ಲೀಟರ್ ನಕಲಿ ವೈನ್, 300 ಲೀಟರ್ ಬಟಾಟೆ ಮಿಶ್ರಣದ ಬೆಲ್ಲದ ಕೊಳೆಯನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಸದ್ಯ ಇಬ್ಬರು ಆರೋಪಿಗಳನ್ನು ಅಬಕಾರಿ ಇಲಾಖಾ ಅಧಿಕಾರಿಗಳು ದಸ್ತಗಿರಿ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
- Advertisement -