- Advertisement -
- Advertisement -
ಮೂಡಿಗೆರೆ, ಎ.18: ಸಿಡಿಲು ಬಡಿದು ತಮಿಳುನಾಡು ಮೂಲದ ಮೂವರು ಮಹಿಳಾ ಕಾರ್ಮಿಕರು ಮೃತಪಟ್ಟ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹಿತ್ಲುಮಕ್ಕಿ ಗ್ರಾಮದಲ್ಲಿ ಶನಿವಾರ ನಡೆದಿದೆ.
ಮೃತ ಮಹಿಳೆಯರನ್ನು ಜ್ಯೋತಿ (28) ಮಾದಮ್ಮ(65) ಮಾರಿ (27) ಎಂದು ಗುರುತಿಸಲಾಗಿದೆ.
ಮೃತರು ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಪಾಪರೆಟ್ಟಿ ತಾಲೂಕಿನವರಾಗಿದ್ದು, ಕೂಲಿ ಕೆಲಸಕ್ಕೆಂದು ಚಿಕ್ಕಮಗಳೂರಿಗೆ ಬಂದಿದ್ದರು. ಇಂದು ಧಾರಾಕಾರ ಮಳೆಯೊಂದಿಗೆ ಸಿಡಿದು ಬಡಿದ ಪರಿಣಾಮ ಮೂವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಕ್ಕಮಗಳೂರು ಜಿಲ್ಲೆಯ ತರೀಕೆರೆಯಲ್ಲಿ ವರುಣ ಅಬ್ಬರಿಸಿದ್ದಾರೆ. ಜಿಲ್ಲೆಯಲ್ಲಿ ಆಲಿ ಕಲ್ಲು ಮಳೆಯಾಗಿದ್ದು, ಸತತ ಒಂದು ಗಂಟೆ ಸುರಿದ ಮಳೆಗೆ ಜನ ತತ್ತರಿಸಿದ್ದಾರೆ. ತರೀಕೆರೆ ಸುತ್ತಮುತ್ತಲೂ ಇಂದು ಸಂಜೆ ನಿರಂತರವಾಗಿ ಆಲಿಕಲ್ಲು ಸಹಿತ ಭಾರೀ ಮಳೆ ಸುರಿದಿದೆ. ಮಳೆಯಿಂದ ರಸ್ತೆ ಬದಿ ಮರಗಳು ಧರೆಗೆ ಉರುಳಿ ಬಿದ್ದಿವೆ. ಗಾಳಿ ಮಳೆಯ ಆರ್ಭಟದಿಂದಾಗಿ ಜನರೂ ಆತಂಕಗೊಂಡಿದ್ದಾರೆ.
- Advertisement -