- Advertisement -
- Advertisement -
ಪ್ರಪಂಚದಾದ್ಯಂತ ಕೊರೊನಾ ವೈರಸ್ ಸೋಂಕು ಹೆಚ್ಚಾಗ್ತಿದೆ. ಸೋಂಕು ನಿಯಂತ್ರಣಕ್ಕೆ ವಿಶ್ವದ ಅನೇಕ ದೇಶಗಳಲ್ಲಿ ಲಾಕ್ ಡೌನ್ ಘೋಷಣೆಯಾಗಿದೆ. ಈ ಮಧ್ಯೆ ಯುಎನ್ ವರದಿಯೊಂದು ಆಘಾತ ನೀಡಿದೆ. ವಿಶ್ವ ಮತ್ತು ಭಾರತ ತೀವ್ರ ಆರ್ಥಿಕ ಕುಸಿತವನ್ನು ಎದುರಿಸಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಲಾಕ್ ಡೌನ್ ವೇಳೆ ಆರ್ಥಿಕ ಕುಸಿತವನ್ನು ನಿಯಂತ್ರಿಸಲು ಮೋದಿ ಸರ್ಕಾರ ಸಾಕಷ್ಟು ಪ್ರಯತ್ನಗಳನ್ನು ನಡೆಸುತ್ತಿದೆ. ಆದ್ರೆ ಮುಂದಿನ ದಿನಗಳಲ್ಲಿ ಸುಮಾರು 10 ಕೋಟಿ ಜನರು ಬಡತನ ರೇಖೆಗಿಂತ ಕೆಳಗಿಳಿಯಲಿದ್ದಾರೆಂದು ಯುಎನ್ ವರದಿ ಮಾಡಿದೆ. ಆರ್ಥಿಕ ಚಟುವಟಿಕೆ ಸಂಪೂರ್ಣವಾಗಿ ನಿಂತಿರುವುದು ಭಾರತದ ಈ ಸ್ಥಿತಿಗೆ ಕಾರಣವಾಗಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ದಿನಕ್ಕೆ 245 ರೂಪಾಯಿಗಿಂತ ಕಡಿಮೆ ಗಳಿಸುವ ಜನರನ್ನು ಬಡತನ ರೇಖೆಗಿಂತ ಕೆಳಗಿಡಲಾಗುತ್ತದೆ. ಭಾರತದಲ್ಲಿ ಸುಮಾರು 60 ಪ್ರತಿಶತದಷ್ಟು ಜನಸಂಖ್ಯೆ ಅಂದರೆ 812 ಮಿಲಿಯನ್ ಜನರು ಬಡತನ ರೇಖೆಗಿಂತ ಕೆಳಗಿದ್ದಾರೆ.
- Advertisement -