- Advertisement -
- Advertisement -
ಮುಂಬೈ: ಕರ್ನಾಟಕ ಮೂಲದ ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ಮತ್ತು ಬಾಲಿವುಡ್ ನಟ ಸುನಿಲ್ ಶೆಟ್ಟಿ ಪುತ್ರಿ, ನಟಿ ಅಥಿಯಾ ಶೆಟ್ಟಿ ತಮ್ಮಿಬ್ಬರ ಸಂಬಂಧವನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ.
ರಾಹುಲ್ ಜನ್ಮದಿನಕ್ಕೆ ಶುಭ ಕೋರಿದ್ದ ಅಥಿಯಾ ರಾಹುಲ್ ಜತೆಗೆ ಕ್ಲೋಸ್ ಆಗಿರುವ ಫೋಟೋವನ್ನು ಪ್ರಕಟಿಸಿ ಹ್ಯಾಪೀ ಬರ್ತ್ ಡೇ ಮೈ ಪರ್ಸನ್ ಕೆಎಲ್ ರಾಹುಲ್ ಎಂದು ಶುಭ ಕೋರಿದ್ದಾರೆ.
ರಾಹುಲ್ ಕೂಡಾ ಈ ಪೋಸ್ಟ್ ಗೆ ಹಾರ್ಟ್ ಇಮೋಜಿ ಮೂಲಕ ಪ್ರತಿಕ್ರಿಯಿಸಿದ್ದಾರೆ. ಆ ಮೂಲಕ ಇಬ್ಬರೂ ತಮ್ಮಿಬ್ಬರ ನಡುವಿನ ಪ್ರೀತಿ ವಿಷಯವನ್ನು ಬಹಿರಂಗವಾಗಿ ಒಪ್ಪಿಕೊಂಡಂತಾಗಿದೆ.
- Advertisement -