- Advertisement -
- Advertisement -
ಕರೋನಾ ವೈರಸ್ ಕಾರಣಕ್ಕಾಗಿ ಕಳೆದ 1ತಿಂಗಳಿನಿಂದ ದೇಶದಾದ್ಯಂತ ಲಾಕ್ ಡೌನ್ ಜಾರಿಯಲ್ಲಿರುವುದರಿಂದ ವ್ಯಾಪಾರ ವಹಿವಾಟಿಲ್ಲದೆ ಕಂಗೆಟ್ಟಿದ್ದ ವರ್ತಕರುಗಳು ಈಗ ಕೇಂದ್ರ ಸರ್ಕಾರ ಕೆಲವು ವಲಯದಲ್ಲಿ ಲಾಕ್ ಡೌನ್ ಸಡಿಲಿಕೆ ಮಾಡಿದ್ದರಿಂದ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು.
ಅದರಲ್ಲೂ ಅಕ್ಷಯ ತೃತೀಯ ಸಂದರ್ಭದಲ್ಲಿ ಲಾಕ್ ಡೌನ್ ಸಡಿಲಿಕೆ ಆಗಿದ್ದರಿಂದ ಸಂತಸಗೊಂಡಿದ್ದ ಚಿನ್ನದಂಗಡಿ ಮಾಲೀಕರು ಭರ್ಜರಿ ವಹಿವಾಟು ನಡೆಯಬಹುದೆಂಬ ನಿರೀಕ್ಷೆ ಹೊಂದಿದ್ದರು. ಆದರೆ ಆ ನಿರೀಕ್ಷೆ ಈಗ ಹುಸಿಯಾಗಿದೆ.
ಅಕ್ಷಯ ತೃತೀಯ ಸಂದರ್ಭದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಕೇವಲ ಶೇಕಡಾ 3 ರಷ್ಟು ವಹಿವಾಟು ನಡೆದಿದೆ ಎನ್ನಲಾಗಿದ್ದು, ಇದರಿಂದ ಚಿನ್ನದಂಗಡಿ ಮಾಲೀಕರುಗಳಿಗೆ ತೀವ್ರ ನಿರಾಸೆಯಾಗಿದೆ. ಕಳೆದ ವರ್ಷ ಅಕ್ಷಯ ತೃತೀಯದಂದು 30 ಟನ್ ಚಿನ್ನ ಮಾರಾಟವಾಗಿದ್ದರೆ ಈ ಬಾರಿ ಕೇವಲ 1 ಟನ್ ಚಿನ್ನ ಮಾರಾಟವಾಗಿದೆ ಎಂದು ಹೇಳಲಾಗಿದೆ.
- Advertisement -