Friday, July 19, 2024
Homeತಾಜಾ ಸುದ್ದಿತಂದೆಯ ಮರ್ಮಾಂಗ ಕತ್ತರಿಸಿ ಬರ್ಬರವಾಗಿ ಕೊಲೆ ಮಾಡಿದ ಜಿಮ್ ಟ್ರೈನರ್

ತಂದೆಯ ಮರ್ಮಾಂಗ ಕತ್ತರಿಸಿ ಬರ್ಬರವಾಗಿ ಕೊಲೆ ಮಾಡಿದ ಜಿಮ್ ಟ್ರೈನರ್

spot_img
- Advertisement -
- Advertisement -

ಮಹಾರಾಷ್ಟ್ರದ ನಾಗಪುರದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಹುಡ್ಕೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 55 ವರ್ಷದ ವ್ಯಕ್ತಿಯನ್ನು ಆತನ ಪುತ್ರನೇ ಮರ್ಮಾಂಗ ಕತ್ತರಿಸಿ ಬರ್ಬರವಾಗಿ ಕೊಲೆ ಮಾಡಿದ್ದಾನೆ.

ಶನಿವಾರ ರಾತ್ರಿ ಘಟನೆ ನಡೆದಿದ್ದು ಭೀಕರ ಹತ್ಯೆಗೆ ಜನ ಬೆಚ್ಚಿಬಿದ್ದಿದ್ದಾರೆ. 55 ವರ್ಷದ ವಿಜಯ್ ಕೊಲೆಯಾದ ವ್ಯಕ್ತಿ. ಆತನ ಪುತ್ರ ವಿಕ್ರಾಂತ್(25) ಕೊಲೆ ಆರೋಪಿಯಾಗಿದ್ದಾನೆ. ಜಿಮ್ ಟ್ರೈನರ್ ಆಗಿದ್ದ ವಿಕ್ರಾಂತ್ ಸಿನಿಮಾ ಡೈಲಾಗ್ ಹೇಳುತ್ತಾ ತಂದೆಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

ಶನಿವಾರ ರಾತ್ರಿ ವಿನಾಕಾರಣ ಆಕ್ರೋಶಗೊಂಡ ವಿಕ್ರಾಂತ್ ತಂದೆ ವಿಜಯ್ ಕುತ್ತಿಗೆಗೆ ಬಲವಾಗಿ ಕಚ್ಚಿದ್ದರಿಂದ ರಕ್ತಸ್ರಾವವಾಗಿದೆ. ಬಳಿಕ ತಂದೆಯನ್ನು ಮನೆಯ ಮೇಲೆ ಎಳೆದೊಯ್ದ ವಿಕ್ರಾಂತ್ ತಂದೆಯ ಮರ್ಮಾಂಗವನ್ನು ಕತ್ತರಿಸಿ ವಿಕೃತಿ ಮೆರೆದಿದ್ದು, ತಂದೆಯನ್ನು ಕೊಚ್ಚಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಕುಟುಂಬದವರ ಹೇಳಿಕೆ ಪಡೆದ ಪೊಲೀಸರು, ವಿಕ್ರಾಂತ್ ತಂದೆಯನ್ನು ಕೊಲೆ ಮಾಡುವ ವೇಳೆಯಲ್ಲಿ ಸಿನಿಮಾದ ಡೈಲಾಗ್ ಹೇಳುತ್ತಿದ್ದ. ಆತನ ಕ್ರೌರ್ಯ ಹೇಳಲು ಅಸಾಧ್ಯವಾಗಿತ್ತು ಎಂದು ತಿಳಿಸಿದ್ದಾರೆ.

ವಿಜಯ್ ಅವರನ್ನು ಕೊಲೆ ಮಾಡಲು ಮುಂದಾದ ವೇಳೆ ತಪ್ಪಿಸಲು ಪ್ರಯತ್ನಿಸಿದ್ದಕ್ಕೆ ನಮ್ಮನ್ನೇ ಕೊಲೆ ಮಾಡುವುದಾಗಿ ವಿಕ್ರಾಂತ್ ಬೆದರಿಸಿದ್ದಾನೆ ಎಂದು ಮೃತರ ಪತ್ನಿ ಮತ್ತು ಪುತ್ರಿ ಹೇಳಿದ್ದಾರೆ. ಪ್ರಕರಣದ ಮಾಹಿತಿ ಪಡೆದ ಪೊಲೀಸರು ಹರಸಾಹಸ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ ಎಂದು ಹುಡ್ಕೇಶ್ವರ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ರಾಜಕಮಲ್ ವಾಘ್ ಮೋರೆ ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!