- Advertisement -
- Advertisement -
ಕಾಸರಗೋಡು: ಕ್ಷುಲ್ಲಕ ಕಾರಣಕ್ಕಾಗಿ ಗುಂಡು ಹಾರಿಸಿ ವ್ಯಕ್ತಿಯೋರ್ವನನ್ನು ಕೊಲೆಗೈದ ಘಟನೆ ಕಾಸರಗೋಡು ಜಿಲ್ಲೆಯ ಪಿಲಿಕ್ಕೋಡ್ ನಲ್ಲಿ ನಡೆದಿದೆ. ಪಿಲಿಕ್ಕೋಡಿನ ಕೆ. ಸಿ ಸುರೇಂದ್ರನ್( 54) ಕೊಲೆಯಾದ ವ್ಯಕ್ತಿ. ಆರೋಪಿ ಸನಲ್ (30) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ನಿನ್ನೆ ಸಂಜೆ ಈ ದಾರುಣ ಕೃತ್ಯ ನಡೆದಿದೆ. ಸುರೇಂದ್ರನ್ ಹಾಗೂ ಸನಲ್ ನಡುವೆ ಆಸ್ತಿ ವಿಚಾರವಾಗಿ ಮಾತಿನ ಚಕಮಕಿ ನಡೆದಿದೆ. ಈ ಸಂದರ್ಭದಲ್ಲಿ ಸನಲ್ ತನ್ನ ಬಂದೂಕಿನಿಂದ ಸುರೇಂದ್ರನ್ ಮೇಲೆ ಗುಂಡು ಹಾರಿಸಿದ್ದಾರೆ. ಗುಂಡು ಕುತ್ತಿಗೆಗೆ ತಾಗಿದ್ದರಿಂದ ಸ್ಥಳದಲ್ಲೇ ಕುಸಿದು ಬಿದ್ದ ಸುರೇಂದ್ರನ್ ಮೃತಪಟ್ಟಿದ್ದಾರೆ. ಬಳಿಕ ಆರೋಪಿ ಚಂದೇರ ಪೊಲೀಸ್ ಠಾಣೆ ಗೆ ತಲುಪಿ ಶರಣಾಗಿದ್ದಾನೆ.
- Advertisement -