Friday, April 26, 2024
Homeಉದ್ಯಮಜನಸಾಮಾನ್ಯರಿಗೆ ಮತ್ತೊಂದು ಶಾಕ್: ಮತ್ತಷ್ಟು ದುಬಾರಿಯಾದ ಪೆಟ್ರೋಲ್, ಡೀಸೆಲ್ ಬೆಲೆ

ಜನಸಾಮಾನ್ಯರಿಗೆ ಮತ್ತೊಂದು ಶಾಕ್: ಮತ್ತಷ್ಟು ದುಬಾರಿಯಾದ ಪೆಟ್ರೋಲ್, ಡೀಸೆಲ್ ಬೆಲೆ

spot_img
- Advertisement -
- Advertisement -

ದೆಹಲಿ: ಕೇಂದ್ರ ಬಜೆಟ್​ 2021-22ರಲ್ಲಿ ಪೆಟ್ರೋಲ್​ ಹಾಗೂ ಡಿಸೇಲ್​ಗಳ ದರವನ್ನ ಏರಿಕೆ ಮಾಡಲಾಗಿದೆ. ಹಾಗೂ ಈ ಪರಿಷ್ಕೃತ ದರವು ಮಧ್ಯರಾತ್ರಿಯಿಂದಲೇ ಜಾರಿಯಾಗಲಿದೆ. ಪೆಟ್ರೋಲ್ ದರ ಲೀಟರ್​ಗೆ 2.5 ರೂಪಾಯಿ ಏರಿಕೆಯಾಗಿದೆ. ಡೀಸೆಲ್ ದರ ಲೀಟರ್​ಗೆ 4 ರೂಪಾಯಿ ಏರಿಕೆಯಾಗಿದೆ. ಕೃಷಿ ಮೂಲಸೌಕರ್ಯ ಸೆಸ್ ಕಾರಣದಿಂದ ಇಂಧನ ದರ ಏರಿಕೆಯಾಗಿದೆ.

ಈ ಏರಿಕೆಯಾದ ಹಣದಿಂದ ಸಂಗ್ರಹವಾದ ಆದಾಯವು ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಬಳಕೆಯಾಗಲಿದೆ. ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ನಲ್ಲಿ ಬ್ರಾಂಡ್ ಅಲ್ಲದ ಪ್ರತಿ ಲೀಟರ್ ಪೆಟ್ರೋಲ್ ಗೆ 1.4 ರು ಮತ್ತು ಡೀಸೆಲ್ ಗೆ 1.8 ರು ಅಬಕಾರಿ ಸುಂಕ ವಿಧಿಸಲಾಗಿದೆ. ಬ್ರಾಂಡೆಡ್ ಪೆಟ್ರೋಲ್ ಮತ್ತು ಡೀಸೆಲ್ ಕ್ರಮವಾಗಿ ಲೀಟರ್‌ಗೆ 11 ಮತ್ತು 8 ರೂ. ಸುಂಕ ವಿಧಿಸಲಾಗಿದೆ.

ಕೇಂದ್ರ ಸರ್ಕಾರ ಇದೀಗ ಮತ್ತೆ ತೈಲದ ಮೇಲಿನ ಸೆಸ್​ ಏರಿಕೆ ಮಾಡುವ ಮೂಲಕ ಮಧ್ಯಮ ವರ್ಗದ ಜರಿಗೆ ಮತ್ತಷ್ಟು ಹೊರೆ ನೀಡಿದೆ. ಈ ಮೂಲಕ ದಿನ ನಿತ್ಯದ ಬೆಲೆಯೂ ಏರಿಕೆಯಾಗಲಿದ್ದು, ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ನೂಕಲಿದೆ ಎನ್ನಲಾಗುತ್ತಿದೆ.

- Advertisement -
spot_img

Latest News

error: Content is protected !!