Friday, June 5, 2026
Homeಕರಾವಳಿಕಂಬಳದಲ್ಲಿ ಓಡುತ್ತಿದ್ದಾಗ ಬಿದ್ದು ಉಸೇನ್ ಬೋಲ್ಟ್ ಖ್ಯಾತಿಯ ಶ್ರೀನಿವಾಸ ಗೌಡಗೆ ಗಾಯ

ಕಂಬಳದಲ್ಲಿ ಓಡುತ್ತಿದ್ದಾಗ ಬಿದ್ದು ಉಸೇನ್ ಬೋಲ್ಟ್ ಖ್ಯಾತಿಯ ಶ್ರೀನಿವಾಸ ಗೌಡಗೆ ಗಾಯ

- Advertisement -
- Advertisement -

ಮಂಗಳೂರು : ಐಕಳ ಕಂಬಳದಲ್ಲಿ 100 ಮೀಟರ್ ಕಂಬಳಗದ್ದೆಯ ದೂರವನ್ನು ಜಸ್ಟ್ 9.55 ಸೆಕೆಂಡ್ ನಲ್ಲಿ ಕ್ರಮಿಸುವ ಮೂಲಕ, ಶ್ರೀನಿವಾಸ್ ಗೌಡ, ಕಂಬಳದ ಉಸೇನ್ ಬೋಲ್ಟ್ ಎಂಬುದಾಗಿಯೇ ಗುರ್ತಿಸಿಕೊಂಡಿದ್ದರು. ಇದೇ ಶ್ರೀನಿವಾಸ್ ಗೌಡ ಅವರು, ಮೊದಲ ಕಂಬಳದಲ್ಲೇ ಕುಸಿದು ಬಿದ್ದು ಗಾಯಗೊಂಡಿದ್ದಾರೆ.

ಈ ವರ್ಷದ ಮೊದಲ ಕಂಬಳ, ಹೊಕ್ಕಾಡಿಗೋಳಿಯಲ್ಲಿ ಆರಂಭಗೊಂಡಿತ್ತು. ಈ ಕಂಬಳದಲ್ಲಿ ಭಾಗವಹಿಸಿದ್ದಂತ ಮಿಜಾರು ಶ್ರೀನಿವಾಸ ಗೌಡ, ಫ್ರೀ ಕ್ವಾರ್ಟರ್ ಫೈನಲ್ ಕೂಡ ತಲುಪಿದ್ದರು. ಇಂತಹ ಪ್ರೀ ಕ್ವಾರ್ಟರ್ ಫೈನಲ್ ನಲ್ಲಿ ಇರುವೈಲು ಪಾಣಿಲ ಬಾಡ ಪೂಜಾರಿಯವರ ನೇಗಿಲು, ಹಿರಿಯ ವಿಭಾಗದ ಕೋಣಗಳನ್ನು ಓಡಿಸುತ್ತಿದ್ದಂತ ಸಂದರ್ಭದಲ್ಲಿ ಕರೆಯ ಮಧ್ಯಭಾಗಕ್ಕೆ ಡಿಕ್ಕಿಹೊಡೆದು, ಶ್ರೀನಿವಾಸ್ ಗೌಡ ಕುಸಿದು ಬಿದ್ದಿದ್ದರು.

ಹೀಗೆ ಕುಸಿದು ಬಿದ್ದಿದ್ದರಿಂದಾಗಿ ಶ್ರೀನಿವಾಸ್ ಗೌಡ ಅವರ ಕೈ ಹಾಗೂ ಎದೆಯ ಭಾಗಕ್ಕೆ ಅಲ್ಪ ಸ್ವಲ್ಪ ಗಾಯಗಳಾಗಿವೆ. ಆನಂತ್ರದ ಯಾವುದೇ ಓಟದಲ್ಲಿ ಅವರು ಭಾಗಿಯಾಗಿಲ್ಲ. ಆದ್ರೇ ಫೆಬ್ರವರಿ 6ರಂದು ನಡೆಯುವ ಐಕಳ ಕಂಬಳದಲ್ಲಿ ಶ್ರೀನಿವಾಸ್ ಗೌಡ ಭಾಗವಹಿಸಲಿದ್ದಾರೆ ಎಂಬುದಾಗಿ ಶ್ರೀನಿವಾಸ್ ಗೌಡ ಆಪ್ತರು ತಿಳಿಸಿದ್ದಾರೆ.

- Advertisement -

Latest News

error: Content is protected !!