ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿ 7 ಆರೋಪಿಗಳಿಗೆ ಮತ್ತೆ ಜೈಲಾಗಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ ಏಳು ಆರೋಪಿಗಳಿಗೆ ಜಾಮೀನು ನೀಡಿದ್ದನ್ನು ಪ್ರಶ್ನಿಸಿ ಪೊಲೀಸರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಇಂದು ಈ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸಿದ್ದು ದರ್ಶನ್ ಹೈಕೋರ್ಟ್ ನೀಡಿದ ಜಾಮೀನನ್ನು ರದ್ದುಗೊಳಿಸಿದ್ದು, ಡಿ ಬಾಸ್ ಗೆ ಮತ್ತೆ ಜೈಲೇ ಫಿಕ್ಸ್ ಆಗಿದೆ.
ದರ್ಶನ್-ಪವಿತ್ರಗೌಡ ಸೇರಿ ಒಟ್ಟು 7 ಮಂದಿಗೆ ಮತ್ತೆ ಜೈಲೇ ಫಿಕ್ಸ್ ಆಗಿದೆ. ದರ್ಶನ್ , ಜಗದೀಶ್, ಅನುಕುಮಾರ್, ಪ್ರದೋಶ್, ನಾಗರಾಜ್, ಲಕ್ಷ್ಮಣ್ ಸೇರಿ ಏಳು ಆರೋಪಿಗಳಿಗೆ ಜೈಲು ವಿಧಿಸಿ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.
ಇನ್ನು ಈ ಹಿಂದೆ ಜೈಲಲ್ಲಿ ಆರೋಪಿಗಳಿಗೆ ವಿಐಪಿ ಸತ್ಕಾರ ನೀಡಿದಕ್ಕೆ ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಇನ್ಮುಂದೆ ಈ ರೀತಿ ಆತಿಥ್ಯ ನೀಡಿದ್ರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸುಪ್ರೀ ಕೋರ್ಟ್ ಎಚ್ಚರಿಸಿದೆ. ಅಲ್ಲದೇ ಬೇಲ್ ನೀಡಿದ್ದ ಹೈ ಕೋರ್ಟ್ ವಿರುದ್ಧವೂ ‘ಸುಪ್ರೀಂ’ ಅಸಮಾಧಾನ ಹೊರ ಹಾಕಿದೆ. ಮುಂದೆ ಈ ರೀತಿ ಬೆಳವಣಿಗೆ ನಡೆದ್ರೆ ಸೂಕ್ತ ಕ್ರಮ ಜರುಗಿಸುತ್ತೇವೆ ಎಂದು ಎಚ್ಚರಿಸಿದೆ. ಈ ತೀರ್ಪಿನ ಪ್ರತಿಯನ್ನ ಎಲ್ಲಾ ರಾಜ್ಯಗಳಿಗೂ ಕಳಿಸುವಂತೆ ‘ಸುಪ್ರೀಂ’ ಸೂಚನೆ ನೀಡಿದೆ.


