Friday, December 6, 2024
Homeಅಪರಾಧಬಾಲಿವುಡ್ ನಟ ಸಲ್ಮಾನ್ ಖಾನ್ ಬಳಿಕ ಶಾರುಖ್ ಖಾನ್ ಗೂ ಜೀವ ಬೆದರಿಕೆ

ಬಾಲಿವುಡ್ ನಟ ಸಲ್ಮಾನ್ ಖಾನ್ ಬಳಿಕ ಶಾರುಖ್ ಖಾನ್ ಗೂ ಜೀವ ಬೆದರಿಕೆ

spot_img
- Advertisement -
- Advertisement -

ಮುಂಬೈ: ನಟ ಸಲ್ಮಾನ್ ಖಾನ್ ಗೆ ಹಲವಾರು ಬಾರಿ  ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ನಿಂದ ಕೊಲೆ ಬೆದರಿಕೆಗಳು ಬಂದಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಇದೀಗ ಇಂತಹ ವಿಚಾರದ ಬೆನ್ನಲ್ಲೇ ಬಾಲಿವುಡ್ ಕಿಂಗ್ ಎಂದೇ ಪ್ರಸಿದ್ಧಿ ಪಡೆದಿರುವ ಶಾರುಖ್ ಖಾನ್ ಗೂ ನಂ.7 ಗುರುವಾರದಂದು ಕೊಲೆ ಬೆದರಿಕೆ ಬಂದಿರುವುದಾಗಿ ವರದಿಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಬಾಂದ್ರಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ನಟ ಶಾರುಖ್ ಖಾನ್ ಗೆ ರಾಯಪುರದ ವ್ಯಕ್ತಿಯಿಂದ ಬೆದರಿಕೆ ಬಂದಿದೆ ಎನ್ನಲಾಗಿದೆ. ಮೂಲಗಳ ಪ್ರಕಾರ ಶಾರುಖ್ ಖಾನ್ ಅವರ ನಿರ್ಮಾಣ ಸಂಸ್ಥೆ ರೆಡ್ ಚಿಲ್ಲಿಸ್ ಕಚೇರಿಗೆ ಕರೆ ಬಂದಿದ್ದು ಈ ವೇಳೆ ಕರೆ ಮಾಡಿದ ವ್ಯಕ್ತಿ ಐವತ್ತು ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾನೆ ಎನ್ನಲಾಗಿದೆ. ಬೇಡಿಕೆಯಂತೆ ಹಣವನ್ನು ಕೊಡದೇ ಹೋದರೆ ನಟನನ್ನು ಕೊಲೆ ಮಾಡುವುದಾಗಿ ಕೊಲೆ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.

ಈ ವಿಚಾರವನ್ನು ಕೂಡಲೇ  ರೆಡ್ ಚಿಲ್ಲಿಸ್ ಕಚೇರಿಯ ಸಿಬ್ಬಂದಿ ಮುಂಬೈ ನ ಬಾಂದ್ರಾ ಪೊಲೀಸರಿಗೆ ತಿಳಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವಂತೆ ಕೋರಿದ್ದಾರೆ.

ಕಾರ್ಯಾಚರಣೆಯ ಸಂದರ್ಭದಲ್ಲಿ ಪೊಲೀಸರಿಗೆ ಕರೆ ಛತ್ತೀಸ್‌ಗಢ ರಾಯ್‌ಪುರದಿಂದ ಬಂದಿರುವುದು ಗೊತ್ತಾಗಿದ್ದು ಮೊಬೈಲ್ ನಂಬರ್ ಪರಿಶೀಲಿಸಿದಾಗ ಫೈಜಾನ್ ಖಾನ್ ಎಂದು ತಿಳಿದು ಬಂದಿದ್ದು ಸದ್ಯ ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ. ಈ ಹಿಂದೆಯೂ ಶಾರುಖ್ ಖಾನ್ ಅವರಿಗೆ ಬೆದರಿಕೆಗಳು ಬಂದಿದ್ದು ಮುಂಬೈ ಪೊಲೀಸರು Y+ ಭದ್ರತೆ ನೀಡಿದ್ದರು ಈ ನಡುವೆ ಬೆದರಿಕೆಗಳು ಬಂದಿರುವುದು ಸಂಚಲನ ಮೂಡಿಸಿದೆ.

- Advertisement -
spot_img

Latest News

error: Content is protected !!