ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಮಿ ಕೊಲೆ ಪ್ರಕರಣದ ಎ1 ಪವಿತ್ರಾ ಗೌಡ ಜಾಮೀನು ಅರ್ಜಿಯ ವಿಚಾರಣೆ ಗುರುವಾರ ನಂ.7 ಗುರುವಾರದಂದು ಹೈಕೋರ್ಟಿನಲ್ಲಿ ನಡೆದಿದ್ದು, ವಿಚಾರಣೆಯನ್ನು ನ.21 ಕ್ಕೆ ಮುಂದೂಡಲಾಗಿದೆ.
ನ್ಯಾಯಾಧೀಶ ವಿಶ್ವಜಿತ್ ಪೀಠದಲ್ಲಿ ನಟಿ ಪ್ರವಿತ್ರಾ ಗೌಡ ಸೇರಿ ಅನುಕುಮಾರ್, ಲಕ್ಷ್ಮಣ್ ಮತ್ತು ನಾಗರಾಜ್ ಅವರ ಜಾಮೀನು ಅರ್ಜಿಗಳ ವಿಚಾರಣೆ ನಡೆದಿದೆ.
ಆರೋಪಿ ಲಕ್ಷ್ಮಣ್ ಮತ್ತು ನಾಗರಾಜು ಸೇರಿದಂತೆ ನಾಲ್ವರ ಪರ ವಕೀಲರು ವಾದ ಮಂಡನೆಗೆ ಕಾಲಾವಕಾಶ ಕೋರಿದ್ದಾರೆ. ಹೀಗಾಗಿ ವಿಚಾರಣೆ ನ.21 ಕ್ಕೆ ಮುಂದೂಡಲಾಗಿದೆ.
ಇನ್ನು ಪ್ರಕರಣದಲ್ಲಿ ಎ2 ಆಗಿರುವ ದರ್ಶನ್ ಅವರಿಗೆ ಇತ್ತೀಚೆಗೆ ಹೈಕೋರ್ಟ್ ಮೆಡಿಕಲ್ ಗ್ರೌಂಡ್ಸ್ ಮೇಲೆ ಮಧ್ಯಂತರ ಜಾಮೀನು ನೀಡಿದ್ದು, ನಟ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ವೈದ್ಯರು ದರ್ಶನ್ ಅವರಿಗೆ ಸರ್ಜರಿ ನಡೆಸುವುದು ಸೂಕ್ತವೆಂದು ಪರೀಕ್ಷೆ ಮಾಡಿ ಹೇಳಿದ್ದಾರೆ. ಆದರೆ ದರ್ಶನ್ ಸರ್ಜರಿಗೆ ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ. ಈಗಾಗಲೇ ದರ್ಶನ್ ಅವರ ಮೆಡಿಕಲ್ ವರದಿಯನ್ನು ನ್ಯಾಯಾಲಕ್ಕೆ ಸಲ್ಲಿಕೆ ಮಾಡಲಾಗಿದೆ.