Thursday, June 4, 2026
Homeತಾಜಾ ಸುದ್ದಿಬೆಂಗಳೂರಿನ ಜಯನಗರದಲ್ಲಿ ರಾಘವೇಂದ್ರ ಸ್ವಾಮಿಯ ದರ್ಶನ ಪಡೆದ ಬ್ರಿಟನ್ ಮಾಜಿ ಪ್ರಧಾನಿ ಋಷಿ ಸುನಕ್ ದಂಪತಿ

ಬೆಂಗಳೂರಿನ ಜಯನಗರದಲ್ಲಿ ರಾಘವೇಂದ್ರ ಸ್ವಾಮಿಯ ದರ್ಶನ ಪಡೆದ ಬ್ರಿಟನ್ ಮಾಜಿ ಪ್ರಧಾನಿ ಋಷಿ ಸುನಕ್ ದಂಪತಿ

- Advertisement -
- Advertisement -

ಬೆಂಗಳೂರಿನ ಜಯನಗರದಲ್ಲಿ ಬ್ರಿಟನ್ ಮಾಜಿ ಪ್ರಧಾನಿ ಋಷಿ ಸುನಕ್ ದಂಪತಿ ರಾಘವೇಂದ್ರ ಸ್ವಾಮಿಯ ದರ್ಶನ ಪಡೆದಿದ್ದಾರೆ.

ಬೆಂಗಳೂರಿನ ಜಯನಗರದ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಶ್ರೀಮತಿ ಸುಧಾ ನಾರಾಯಣ ಮೂರ್ತಿ ದಂಪತಿ ಕುಟುಂಬ ಸಮೇತ ಹಾಗೂ ಅವರ ಅಳಿಯ ಬ್ರಿಟನ್ ನ  ಮಾಜಿ  ಪ್ರಧಾನಿ ಋಷಿ ಸುನಕ್ ದಂಪತಿ ಭೇಟಿ ನೀಡಿ  ಶ್ರೀ ರಾಘವೇಂದ್ರ ಸ್ವಾಮಿಗಳ  ದರ್ಶನ ಪಡೆದರು. ಕಾರ್ತಿಕ ಮಾಸದ ಪ್ರಯುಕ್ತ ರಾಯರ ಸನ್ನಿಧಿಯಲ್ಲಿ ದೀಪಗಳನ್ನು ಬೆಳಗಿಸಿ  ಶ್ರೀ ರಾಘವೇಂದ್ರ ಸ್ವಾಮಿಗಳಲ್ಲಿ  ಪ್ರಾರ್ಥನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ  ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಆರ್,  ಕೆ ವಾದಿಂದ್ರಾಚಾರ್ಯರು  ರಾಯರ ಶೇಷ ವಸ್ತ್ರ ಫಲಮಂತ್ರಾಕ್ಷತೆ ಕೊಟ್ಟು ಆಶೀರ್ವದಿಸಿದರು ಈ ಸಂದರ್ಭದಲ್ಲಿ ಶ್ರೀಮಠದ ಅರ್ಚಕ ವರ್ಗದವರು “ವೇದ ಘೋಷ ಮಂತ್ರ” ಪೂರ್ಣ ಕುಂಭ ಸ್ವಾಗತದೊಂದಿಗೆ ಸನ್ನಿಧಿಗೆ ಬರಮಾಡಿಕೊಂಡರು

- Advertisement -

Latest News

error: Content is protected !!