Wednesday, June 3, 2026
Homeಕರಾವಳಿಸುರತ್ಕಲ್:‌ ವಿಮಾನಕ್ಕೆ ಬಳಸುವ ಪೆಟ್ರೋಲ್‌ಗೆ ಸೀಮೆಎಣ್ಣೆ ಕಲಬೆರಕೆ: ಆಹಾರ ಇಲಾಖೆ ಅಧಿಕಾರಿಗಳು, ಪೊಲೀಸರ ದಾಳಿ

ಸುರತ್ಕಲ್:‌ ವಿಮಾನಕ್ಕೆ ಬಳಸುವ ಪೆಟ್ರೋಲ್‌ಗೆ ಸೀಮೆಎಣ್ಣೆ ಕಲಬೆರಕೆ: ಆಹಾರ ಇಲಾಖೆ ಅಧಿಕಾರಿಗಳು, ಪೊಲೀಸರ ದಾಳಿ

- Advertisement -
- Advertisement -

ಸುರತ್ಕಲ್:‌ ವಿಮಾನಗಳಿಗೆ ಬಳಸುವ ಪೆಟ್ರೋಲ್‌ಗೆ ಸೀಮೆಎಣ್ಣೆ ಕಲಬೆರಕೆ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಖಚಿತ ಮಾಹಿತಿ ಮೇರೆಗೆ ಜಿಲ್ಲಾ ಆಹಾರ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ದಾಳಿ ನಡೆಸಿದ ಘಟನೆ ಸುರತ್ಕಲ್‌ ಬಳಿಯ ಬಾಳಾದಲ್ಲಿ ನಡೆದಿದೆ.

ದಾಳಿಯಲ್ಲಿ ಲಕ್ಷಾಂತರ ಮೌಲ್ಯದ ಪೆಟ್ರೋಲ್‌, 2ಟ್ಯಾಂಕರ್‌, ಪಿಕಪ್‌ ಸಹಿತ ಉಪಕರಣಗಳನ್ನು ವಶಕ್ಕೆ ಪಡೆದಿದ್ದಾರೆ. ಆಹಾರ ಇಲಾಖೆಯ ಮಾಣಿಕ್ಯ, ಚೇತನ್‌, ಉಪತಹಶೀಲ್ದಾರ್‌ ನವೀನ್‌, ಸುರತ್ಕಲ್‌ ಎಸ್‌ಐ ಪುನೀತ್‌ ಗಾಂವ್‌ಕರ್‌ ಮತ್ತಿತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಸುರತ್ಕಲ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!