Tuesday, April 30, 2024
Homeಕರಾವಳಿಬೆಳ್ತಂಗಡಿ: ಬಸ್ ನಿಲ್ದಾಣದ ಪಕ್ಕ ಅಪಾಯಕಾರಿ ಗುಂಡಿ ಪ್ರಕರಣ: ನಗರ ಪಂಚಾಯತ್ ಸಿಬ್ಬಂದಿಯಿಂದ ಕೆಲಸ ಆರಂಭ:...

ಬೆಳ್ತಂಗಡಿ: ಬಸ್ ನಿಲ್ದಾಣದ ಪಕ್ಕ ಅಪಾಯಕಾರಿ ಗುಂಡಿ ಪ್ರಕರಣ: ನಗರ ಪಂಚಾಯತ್ ಸಿಬ್ಬಂದಿಯಿಂದ ಕೆಲಸ ಆರಂಭ: ಇದು ಮಹಾಎಕ್ಸ್ ಪ್ರೆಸ್ ವರದಿ IMPACT

spot_img
- Advertisement -
- Advertisement -

ಬೆಳ್ತಂಗಡಿ: ಪಟ್ಟಣದಲ್ಲಿರುವ ಶ್ರೀ ನಾರಾಯಣ ಗುರು ವಾಣಿಜ್ಯ ಸಂಕೀರ್ಣದ ಮುಂಭಾಗದಲ್ಲಿರುವ ಖಾಸಗಿ ರಿಕ್ಷಾ ನಿಲ್ದಾಣದಲ್ಲಿ ಬೃಹತ್ ಗಾತ್ರದ ಅಪಾಯಕಾರಿ ಗುಂಡಿಯೊಂದು ನಿರ್ಮಾಣವಾಗಿರುವ ಬಗ್ಗೆ ಸೋಮವಾರ ಸಂಜೆ ಮಹಾಎಕ್ಸ್ ಪ್ರೆಸ್‌ ವೆಬ್ ಸೈಟ್ ‘ಬೆಳ್ತಂಗಡಿ ನಗರ ಪಂಚಾಯತ್ ಅಧಿಕಾರಿಗಳು ಮೌನ’ ಎಂಬ ಶೀರ್ಷಿಕೆಯಲ್ಲಿ ವರದಿ ಪ್ರಸಾರ ಮಾಡಿತ್ತು. ವರದಿ ಪ್ರಸಾರವಾದ ಬೆನ್ನಲ್ಲೇ ಎಚ್ಚೆತ್ತುಕೊಂಡ ನಗರ ಪಂಚಾಯತ್ ಅಧಿಕಾರಿಗಳು ಇಂದು ಬೆಳ್ತಂಗಡಿ ನಗರ ಪಂಚಾಯತ್ ಸಿಬ್ಬಂದಿಯನ್ನು ಕಳುಹಿಸಿ ಸರಿಪಡಿಸುವ ಕೆಲಸ ನಡೆಯುತ್ತಿದೆ.

ಮಹಾಎಕ್ಸ್ ಪ್ರೆಸ್‌ ವೆಬ್ ಸೈಟ್ ವರದಿ ವಿವರ:  ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿರುವ ಕೊಯ್ಯೂರು ಖಾಸಗಿ ರಿಕ್ಷಾ ನಿಲ್ದಾಣದಲ್ಲಿ ಈ ಅಪಾಯಕಾರಿ ಗುಂಡಿ ನಿರ್ಮಾಣವಾಗಿದೆ. ಈಗಾಗಲೇ ಗುಂಡಿ ಬಿದ್ದು ವಾರವಾಗಿದ್ದರೂ ಕೂಡ ಪಟ್ಟಣ ಪಂಚಾಯತ್ ಆಡಳಿತ ಮೌನವಾಗಿದೆ.

ಇಲ್ಲಿ ದಿನನಿತ್ಯ ನೂರಾರು ವಾಹನಗಳು ಚಲಿಸುತ್ತದೆ. ಸಮೀಪದ ಕಿಸಾನ್ ಟ್ರೆಡರ್ಸ್ ಗೆ ಹತ್ತಾರು ಟನ್ ಗಳಷ್ಟು ರಸಗೊಬ್ಬರ ಹೊತ್ತು ಬೃಹತ್ ಗಾತ್ರದ ಲಾರಿಗಳು ಬರುತ್ತದೆ. ಗುಂಡಿ ಸುಮಾರು 5 ಅಡಿಯಿದ್ದು , ಸುರಂಗ ಮಾರ್ಗದಂತೆ ಗೋಚರಿಸುತ್ತದೆ.

ಆದರೆ ಈ ತನಕವೂ ಪಟ್ಟಣ ಪಂಚಾಯತ್ ಅಪಾಯಕಾರಿ ಗುಂಡಿ ಮುಚ್ಚಲು ಯಾವುದೇ ಕ್ರಮ ಕೈಗೊಳ್ಳದಿರುವುದಕ್ಕೆ ರಿಕ್ಷಾ , ಜೀಪ್ ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದರು‌ ಎಂದು ಮಹಾ ಎಕ್ಸ್‌ಪ್ರೆಸ್‌ ವೆಬ್ ಸೈಟ್ ವರದಿ ಪ್ರಸಾರ ಮಾಡಿತ್ತು. ಇದೀಗ ನಗರ ಪಂಚಾಯತ್ ಅಧಿಕಾರಿಗಳು ಎಚ್ಚೆತ್ತುಕೊಂಡು ಸರಿಪಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

- Advertisement -
spot_img

Latest News

error: Content is protected !!