Sunday, June 7, 2026
Homeಮನರಂಜನೆಎಸ್ ಪಿ ಬಾಲಸುಬ್ರಮಣ್ಯಂ ಅವರ ಶೀಘ್ರ ಚೇತರಿಕೆಗೆ ನಟಿ ಶೃತಿ ಕುಟುಂಬ ಶುಭ ಹಾರೈಸಿದ್ದು ಹೀಗೆ....

ಎಸ್ ಪಿ ಬಾಲಸುಬ್ರಮಣ್ಯಂ ಅವರ ಶೀಘ್ರ ಚೇತರಿಕೆಗೆ ನಟಿ ಶೃತಿ ಕುಟುಂಬ ಶುಭ ಹಾರೈಸಿದ್ದು ಹೀಗೆ….

- Advertisement -
- Advertisement -

ಬೆಂಗಳೂರು : ಗಾಯಕ ಎಸ್ ಪಿ ಬಾಲಸುಬ್ರಮಣ್ಯಂ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ ಎಂದು ಗೊತ್ತಾಗುತ್ತಿದ್ದಂತೆ ಜಗತ್ತಿನ ಮೂಲೆ ಮೂಲೆಯಲ್ಲಿರುವ ಅವರ ಅಭಿಮಾನಿಗಳು ಅವರ ಶೀಘ್ರ ಚೇತರಿಕೆಗೆ ಶುಭ ಹಾರೈಸುತ್ತಿದ್ದಾರೆ.

ಹಿರಿಯ ನಟಿ ಶೃತಿ ಅವರ ಕುಟುಂಬ ಕೂಡ ಎಸ್ ಪಿ ಬಿ ಅವರ ಚೇತರಿಕೆ ಹಾಡಿನ ಮೂಲಕ ಪ್ರಾರ್ಥಿಸಿದೆ. ಶೃತಿ, ಅವರ ಮಗಳು ಗೌರಿ, ಅಪ್ಪ , ಅಮ್ಮಂದಿರು ಎಲ್ಲರೂ ಸೇರಿ ಎಸ್ ಪಿ ಬಾಲಸುಬ್ರಮಣ್ಯಂ ಅವರು ಹಾಡಿದ ನೂರೊಂದು ನೆನಪು ಎದೆಯಾಳದಿಂದ ಹಾಡನ್ನು ಹಾಡುವ ಮೂಲಕ ನೀವು ಬೇಗ ಹುಷಾರಾಗಿ ಬನ್ನಿ ಎಂದು ಹಾರೈಸಿದ್ದಾರೆ. ಇನ್ನು ಇದನ್ನು ವಿಡಿಯೋ ಮಾಡಿ ಶೃತಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, “ವಿಶ್ವದಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಕಲಾಸರಸ್ವತಿ ನೀವು, ನಿಮ್ಮ ಮಗಳಾಗಿ ನಟಿಸಿದ್ದು ನನ್ನ ಭಾಗ್ಯ. ನೀವು ಆದಷ್ಟು ಬೇಗ ಗುಣಮುಖರಾಗಿ ಕಲಾ ಸರಸ್ವತಿ ಸೇವೆ ಮಾಡುವಂತಾಗಲಿ, ಎಂಬ ಹಾರೈಕೆ ಈ ಕಲಾ ಕುಟುಂಬದಿಂದ “ಎಂದು ಬರೆದುಕೊಂಂಡಿದ್ದಾರೆ.

- Advertisement -

Latest News

error: Content is protected !!