Monday, May 6, 2024
Homeತಾಜಾ ಸುದ್ದಿಇಂದು ಕಮಲದ ಕೈ ಹಿಡಿಯಲಿದ್ದಾರೆ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ

ಇಂದು ಕಮಲದ ಕೈ ಹಿಡಿಯಲಿದ್ದಾರೆ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ

spot_img
- Advertisement -
- Advertisement -

ಬೆಂಗಳೂರು: ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಕುಪ್ಪುಸ್ವಾಮಿ ಅವರು ಇಂದು ಬಿಜೆಪಿಗೆ ಸೇರ್ಪಡೆಗೊಳ್ಳಲ್ಲಿದ್ದಾರೆ. ಬೆಳಿಗ್ಗೆ 11 ಗಂಟೆಗೆ ಅವರು ಭಾರತೀಯ ಜನತಾ ಪಕ್ಷ ಸೇರಲಿದ್ದಾರೆ. ಕರ್ನಾಟಕದಲ್ಲಿ ಐಪಿಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಅಣ್ಣಾಮಲೈ, 2019 ರ ಮೇ ತಿಂಗಳಲ್ಲಿ ಪೊಲೀಸ್ ಇಲಾಖೆಗೆ ರಾಜೀನಾಮೆ ನೀಡಿದ್ದರು.

ಪೊಲೀಸ್‌ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ಅವರು ತಾವು ರಾಜಕೀಯ ಸೇರುವುದಿಲ್ಲ ಅಂತ ಹೇಳುತ್ತಿದ್ದರು, ಆದರೆ ಅವರು ರಾಜಕೀಯ ಸೇರಿರುವುದು ಬಹುತೇಕ ನಿಶ್ಚಿತವಾಗಿದೆ. ಅಂದ ಹಾಗೇ ರಾಜಕೀಯದಲ್ಲಿ ಸೇರುವ ಸಲುವಾಗಿಯೇ ಅವರು ಪೊಲೀಸ್‌ ಇಲಾಖೆಗೆ ರಾಜೀನಾಮೆ ನೀಡಿದ್ದರು, ಈ ಕಾರಣಕ್ಕಾಗಿಯೇ ಅವರು ಐಪಿಎಸ್‌ ಮಾಡಿದ್ದರು ಎನ್ನಲಾಗುತ್ತಿದ್ದು, ರಾಜಕೀಯವೇ ಅವರು ಜೀವನ ಕಟ್ಟ ಕಡೆಯ ಆಸೆಯಾಗಿತ್ತು, ಹೀಗಾಗಿ ಬದುಕಿನಲ್ಲಿ ನಾನಾ ವರ್ಗದಲ್ಲಿ ಗುರುತಿಸಿಕೊಂಡು ನಂತರ ಜನಸಾಮಾನ್ಯರನ್ನು ತನ್ನತ್ತ ಸೆಳೆದುಕೊಂಡು ಹೀರೋ ಆದ ನಂತರ ರಾಜಕೀಯಕ್ಕೆ ಬರೋದು ಅವರ ಅಭಿಲಾಶೆಯಾಗಿತ್ತು ಎನ್ನಲಾಗುತ್ತಿದೆ.

ಇದೇ ವೇಳೇ ಅವರು ಖಾಸಗಿ ಮಾಧ್ಯಮವೊಂದರ ಜೊತೆಗೆ ಮಾತನಾಡುತ್ತ ತಮಿಳುನಾಡಿನಲ್ಲಿ ರಾಜಕೀಯದ ದ್ವಂದ್ವವನ್ನು ಹೊಂದಿರುವ ದ್ರಾವಿಡ ಪಕ್ಷಗಳನ್ನು ನಾನು ಸೇರುವುದಕ್ಕೆ ಆಸೆ ಇಲ್ಲ. “ದ್ರಾವಿಡ ಪಕ್ಷಗಳು ಬದಲಾವಣೆಯನ್ನು ತರುವ ಅವರ ಮೂಲ ಉದ್ದೇಶಕ್ಕೆ ನಿಜವಲ್ಲ ಎಂದು ನಾನು ಭಾವಿಸಿರುವೆ. ಅಣ್ಣಾದೂರೈ, ಪೆರಿಯಾರ್ ಮತ್ತು ಎಂಜಿಆರ್ ಆದರ್ಶಗಳು ಇಂದಿನ ನಾಯಕರ ಆದರ್ಶಗಳಿಗಿಂತ ಭಿನ್ನವಾಗಿವೆ ಅಂತ ಅವರು ಹೇಳಿದ್ದಾರೆ.

ಬಿಜೆಪಿಗೆ ಸೇರ್ಪಡೆಗೊಳ್ಳುವ ನಿರ್ಧಾರದ ಬಗ್ಗೆ ಸಾರ್ವಜನಿಕ ಚರ್ಚೆಗೆ ಪ್ರತಿಕ್ರಿಯಿಸಿದ ಅಣ್ಣಾಮಲೈ ಅವರು, ಪೊಲೀಸ್ ಪಡೆಗೆ ಭಿನ್ನವಾಗಿ, ಈಗ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯವಿದೆ ಎಂದು ಹೇಳಿದ್ದು, ನಾನು ಕೆಲವು ಟ್ವೀಟ್‌ಗಳನ್ನು ಆಧರಿಸಿ ನನ್ನ ಸಿದ್ಧಾಂತದ ಬಗ್ಗೆ ಆನ್‌ಲೈನ್‌ನಲ್ಲಿ ಸಾಕಷ್ಟು ಚರ್ಚೆಗಳನ್ನು ಓದುತ್ತಿದ್ದೇನೆ. ನಾನು ಪೊಲೀಸ್ ಅಧಿಕಾರಿಯಾಗಿದ್ದಾಗ, ನನ್ನ ಯಜಮಾನ ಭಾರತದ ಸಂವಿಧಾನ … ನಾನು ಈಗ ಸಂವಿಧಾನಕ್ಕೆ ವಿರುದ್ಧವಾಗಿ ಹೋಗುತ್ತಿಲ್ಲ ಆದರೆ ಪೊಲೀಸ್ ಪಡೆಯಲ್ಲಿದ್ದ ಸಮಯಕ್ಕಿಂತ ಭಿನ್ನವಾಗಿ, ನನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯ ನನಗೆ ಇದೆ, ಹೇಳಿದ್ದಾರೆ.

- Advertisement -
spot_img

Latest News

error: Content is protected !!