Monday, May 6, 2024
Homeತಾಜಾ ಸುದ್ದಿಮಹಾರಾಷ್ಟ್ರ: ಐದು ಅಂತಸ್ತಿನ ಕಟ್ಟಡ ಕುಸಿತದಲ್ಲಿ ಇಬ್ಬರು ಸಾವು, 18 ಮಂದಿಗಾಗಿ ಶೋಧ ಕಾರ್ಯ

ಮಹಾರಾಷ್ಟ್ರ: ಐದು ಅಂತಸ್ತಿನ ಕಟ್ಟಡ ಕುಸಿತದಲ್ಲಿ ಇಬ್ಬರು ಸಾವು, 18 ಮಂದಿಗಾಗಿ ಶೋಧ ಕಾರ್ಯ

spot_img
- Advertisement -
- Advertisement -

ಮುಂಬೈ: ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಮಹಾದ್ ನಗರದಲ್ಲಿ ಸಂಭವಿಸಿರುವ ಕಟ್ಟಡ ಕುಸಿತ ದುರಂತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಅವಶೇಷಗಳಡಿ ಸಿಲುಕಿರುವವರ ರಕ್ಷಣೆಗಾಗಿ ಕಾರ್ಯಾಚರಣೆ ಮುಂದುವರಿಸಲಾಗಿದೆ.

ರಾಯಗಢದ ಐದು ಅಂತಸ್ತಿನ ಕಟ್ಟಡದಲ್ಲಿ 47 ಫ್ಲ್ಯಾಟ್​ಗಳಿದ್ದು, 40 ಕುಟುಂಬಗಳು ವಾಸಿಸುತ್ತಿದ್ದವು. ಘಟನೆಗೂ ಸ್ವಲ್ಪ ಮೊದಲು 20 ರಿಂದ 25 ಕುಟುಂಬದ ಸದಸ್ಯರು ಕಟ್ಟಡದಿಂದ ಹೊರಗೆ ಓಡಿ ಬಂದಿದ್ದರು. 10 ವರ್ಷ ಹಳೆಯದಾದ ಈ ಕಟ್ಟಡದ ಮಾಲೀಕರು ಮತ್ತು ಬಿಲ್ಡರ್ಸ್​, ಇಂಜಿನಿಯರ್​ಗಳ ವಿರುದ್ಧ ಪೊಲೀಸರು ಎಫ್​ಐಆರ್ ದಾಖಲಿಸಿದ್ದಾರೆ.

ಗೃಹ ಸಚಿವ ಅಮಿತ್ ಶಾ ರಾಯಗಢ ಘಟನೆಗೆ ಸಂಬಂಧಿಸಿದಂತೆ ಟ್ವೀಟ್ ಮಾಡಿದ್ದು, ಮಹಾರಾಷ್ಟ್ರದಲ್ಲಿ ನಡೆದಿರುವ ಘಟನೆ ಆಘಾತವುಂಟುಮಾಡಿದೆ. ಎನ್‌ಡಿಆರ್‌ಎಫ್ ಡಿಜಿ ಅವರೊಂದಿಗೆ ನಾನು ಮಾತನಾಡಿದ್ದೇನೆ. ಕಟ್ಟಡದಲ್ಲಿ ಸಿಲುಕಿರುವ ಪ್ರತಿಯೊಬ್ಬರೂ ಸುರಕ್ಷಿತವಾಗಿರಲಿ ಎಂದು ಆಶಿಸುತ್ತೇನೆ ಎಂದು ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!