Thursday, June 4, 2026
Homeಮನರಂಜನೆಹೆಣ್ಣು ಮಗುವಿಗೆ ತಾಯಿಯಾದ ದರ್ಶನ್ ಗೆ ನಾಯಕಿಯಾಗಿದ್ದ ನಟಿ ಸಾಂಘವಿ

ಹೆಣ್ಣು ಮಗುವಿಗೆ ತಾಯಿಯಾದ ದರ್ಶನ್ ಗೆ ನಾಯಕಿಯಾಗಿದ್ದ ನಟಿ ಸಾಂಘವಿ

- Advertisement -
- Advertisement -

ಕನ್ನಡ ಮಾತ್ರಲ್ಲದೆ, ತಮಿಳು, ತೆಲುಗು, ಮಲಯಾಳಂ, ಹಿಂದಿ ಚಿತ್ರರಂಗದಲ್ಲಿ ಜನಪ್ರೀಯತೆ ಪಡೆದಿರುವ ನಟಿ ಮತ್ತು ರೂಪದರ್ಶಿ ಸಾಂಘವಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮಗಳ ಜೊತೆ ಇರುವ ಫೋಟೋವನ್ನು ಸೋಶಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿರುವ ಸಾಂಘವಿ, ಈ ಸಂತೋಷದ ವಿಚಾರವನ್ನು ಬಹಿರಂಗಗೊಳಿಸಿದ್ದಾರೆ. ಅದು ತಮ್ಮ 42ನೇ ವಯಸ್ಸಿನಲ್ಲಿ ಅನ್ನೋದು ವಿಶೇಷ.

ಮೂಲತಃ ಮೈಸೂರಿನವರಾದ ಸಾಂಘವಿ, ಹಿರಿಯ ನಟಿ ಆರತಿ ಅವರ ಹತ್ತಿರ ಸಂಬಂಧಿ ಎಂಬ ಮಾಹಿತಿ ಇದೆ. ಅವರ ತಂದೆ ಮೈಸೂರು ಮೆಡಿಕಲ್‌ ಕಾಲೇಜ್‌ನಲ್ಲಿ ವೈದ್ಯರಾಗಿದ್ದರು. ಮರಿಮಲ್ಲಪ್ಪ ಹೈಸ್ಕೂಲ್‌ನಲ್ಲಿ ಸಾಂಘವಿ ಶಿಕ್ಷಣ ಪಡೆದಿದ್ದರು.

1993ರಲ್ಲಿ ತಮಿಳಿನಲ್ಲಿ ತೆರೆಕಂಡ ‘ಅಮರಾವತಿ’ ಚಿತ್ರದ ಮೂಲಕ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ಆನಂತರ ತಮಿಳಿನಲ್ಲಿ ಎರಡ್ಮೂರು ಸಿನಿಮಾಗಳಲ್ಲಿ ನಟಿಸಿದ ಮೇಲೆ ಕನ್ನಡಕ್ಕೆ ಎಂಟ್ರಿ ನೀಡಿದರು. ಅವರು ಬಣ್ಣ ಹಚ್ಚಿದ ಮೊದಲ ಕನ್ನಡ ಸಿನಿಮಾ ‘ರಾಯರ ಮಗ’. ಆದಾದ ಮೇಲೆ ಸುದೀರ್ಘ 7 ವರ್ಷಗಳ ಕಾಲ ಅವರು ಸ್ಯಾಂಡಲ್‌ವುಡ್‌ನತ್ತ ಮುಖ ಮಾಡಲೇ ಇಲ್ಲ. 90ರ ದಶಕದಲ್ಲಿ ವರ್ಷಕ್ಕೆ 15ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ ಖ್ಯಾತಿ ಸಾಂಘವಿ ಅವರದ್ದು. ಚಿತ್ರರಂಗಕ್ಕೆ ಕಾಲಿಟ್ಟ 15 ವರ್ಷಗಳಲ್ಲಿ ಅವರು ನಟಿಸಿದ ಸಿನಿಮಾಗಳ ಸಂಖ್ಯೆ 100ರ ಗಡಿಯಲ್ಲಿದೆ!

2001ರಲ್ಲಿ ತೆರೆಕಂಡ ‘ದಿಗ್ಗಜರು’ ಚಿತ್ರದ ಮೂಲಕ ಕನ್ನಡಕ್ಕೆ ಸಾಂಘವಿ ವಾಪಸಾದರು. ಆ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆ ಬರೆಯಿತು. ಮತ್ತೆ ತೆಲುಗು-ತಮಿಳಿನಲ್ಲಿ ಬ್ಯುಸಿ ಆದರು. 2008ರಲ್ಲಿ ದರ್ಶನ್ ಜೊತೆ ನಟಿಸಿದ್ದ ‘ಇಂದ್ರ’ ಸಿನಿಮಾ ತೆರೆಕಂಡ ಮೇಲೆ ಸಾಂಘವಿ ಚಿತ್ರರಂಗದಿಂದ ದೀರ್ಘ ಬ್ರೇಕ್ ಪಡೆದುಕೊಂಡರು.

2016ರಲ್ಲಿ ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ವೆಂಕಟೇಶ್ ಅವರನ್ನು ವಿವಾಹವಾದ ಸಾಂಘವಿ, ಸಿನಿಮಾರಂಗದಿಂದ ಸಂಪೂರ್ಣವಾಗಿ ದೂರ ಉಳಿದಿದ್ದರು. ಇದೀಗ ತಾಯಿಯಾಗುವ ಮೂಲಕ ತಮ್ಮ ಅಭಿಮಾನಿಗಳಿಗೆ ಮತ್ತೊಂದು ಖುಷಿ ಸುದ್ದಿ ನೀಡಿದ್ದಾರೆ.

- Advertisement -

Latest News

error: Content is protected !!