Tuesday, May 14, 2024
Homeಕರಾವಳಿಇಂಟರ್ನೆಟ್ ಸಿಗ್ನಲ್ ಸಮಸ್ಯೆ :ಮರವೇರಿ ಕುಳಿತ ಕಾಲೇಜು ವಿದ್ಯಾರ್ಥಿ

ಇಂಟರ್ನೆಟ್ ಸಿಗ್ನಲ್ ಸಮಸ್ಯೆ :ಮರವೇರಿ ಕುಳಿತ ಕಾಲೇಜು ವಿದ್ಯಾರ್ಥಿ

spot_img
- Advertisement -
- Advertisement -

ಬೆಳ್ತಂಗಡಿ : ದೇಶದಲ್ಲಿ ಕೋವಿಡ್ 19 ಲಾಕ್ ಡೌನ್ ಪರಿಣಾಮ ಕೆಲವು ಶಿಕ್ಷಣ ಸಂಸ್ಥೆಗಳು ಆನ್‌ಲೈನ್‌ ಮೂಲಕ ಪಾಠ ಪ್ರಾರಂಭಿಸಿವೆ. ಆದರೆ ಕೆಲವು ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಿಗೆ ಮೊಬೈಲ್ ನೆಟ್‌ವರ್ಕ್ ಬಹು ದೊಡ್ಡ ಸಮಸ್ಯೆ .ಅದಕ್ಕಾಗಿ ಇಲ್ಲೊಬ್ಬ ವಿದ್ಯಾರ್ಥಿ ಏನೇ ಆದರೂ ತರಗತಿಗಳನ್ನು ತಪ್ಪಿಸಬಾರದೆಂದು ಮೊಬೈಲ್ ನೆಟ್‌ವರ್ಕ್‌ ಸಿಗ್ನಲ್ ಗಾಗಿ ಮರ ಹತ್ತಿದ ಘಟನೆ ನಡೆದಿದೆ.
ಶಿರಸಿ ಮೂಲದ ಶ್ರೀರಾಮ್‌ ಹೆಗಡೆ ಉಜಿರೆ ಎಸ್‌ಡಿಎಂ ಕಾಲೇಜಿನ ವಿದ್ಯಾರ್ಥಿ ಯಾಗಿದ್ದು ಸಮಾಜ ಕಾರ್ಯ ವಿಭಾಗದ ದ್ವಿತೀಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ . ಲಾಕ್ ಡೌನ್ ನಿಂದ ತನ್ನ ಹುಟ್ಟೂರು ಶಿರಸಿಗೆ ಹೋಗಿದ್ದಾನೆ. ನಂತರ ಆನ್‌ಲೈನ್‌ ಮೂಲಕ ತರಗತಿಗಳನ್ನು ಆರಂಭಿಸುವ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ಕಾಲೇಜ್ ನಿಂದ ತಿಳಿಸಿದ ಹಿನ್ನಲೆಯಲ್ಲಿ ಕ್ಲಾಸ್ ಗಾಗಿ ಎಲ್ಲ ವಿದ್ಯಾರ್ಥಿಗಳು ತಯಾರಿ ಮಾಡಿಕೊಂಡಿದ್ದರು
ಆದರೆ ಶ್ರೀರಾಮ್‌ ಹುಟ್ಟೂರು ಶಿರಸಿಯ ಬಕ್ಕಳದಲ್ಲಿ ಇಂಟರ್‌ನೆಟ್‌ ಸಮಸ್ಯೆ ಇದ್ದುದರಿಂದ . ತರಗತಿಯಲ್ಲಿ ಭಾಗಿಯಾಗುವುದಕ್ಕೆ ತೊಂದರೆಯಾಗುತಿತ್ತು. ಆದರೆ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕೆಂದು ಶ್ರೀರಾಮ್ ನಿರ್ಧರಿಸಿದ. ಕೈಯಲ್ಲಿ ಮೊಬೈಲನ್ನು ಹಿಡಿದುಕೊಂಡು ನೆಟ್ ವರ್ಕ್ ಎಲ್ಲಿ ಸಿಗಬಹುದು ಎಂದು ಹುಡುಕಿಕೊಂಡ ಹೋದಾಗ ಎಲ್ಲೂ ಸರಿಯಾಗಿ ಸಿಗದೆ ಇದ್ದಾಗ ಮರವೊಂದರ ಮೇಲೇರಿ ಸಿಗ್ನಲ್ ಗಾಗಿ ಹುಡುಕಾಡಿದಾಗ ಮರದ ಮೇಲೆ ಸ್ಪಷ್ಟವಾಗಿ ಸಿಗ್ನಲ್ ದೊರಕುತಿತ್ತು.ಅಲ್ಲಿಂದಲೇ ತನ್ನ ಅನ್ ಲೈನ್ ಕ್ಲಾಸ್ ಮುಗಿಸುತ್ತಿದ್ದ ಇವನ ಈ ಪ್ರಯತ್ನಕ್ಕೆ ಇದೀಗ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.

- Advertisement -
spot_img

Latest News

error: Content is protected !!