Friday, June 26, 2026
Homeತಾಜಾ ಸುದ್ದಿಅಧ್ಯಕ್ಷ ಖ್ಯಾತಿಯ ನಟಿ ಆರೋಹಿತ ಆಪ್‌ ಪಕ್ಷಕ್ಕೆ ಸೇರ್ಪಡೆ

ಅಧ್ಯಕ್ಷ ಖ್ಯಾತಿಯ ನಟಿ ಆರೋಹಿತ ಆಪ್‌ ಪಕ್ಷಕ್ಕೆ ಸೇರ್ಪಡೆ

- Advertisement -
- Advertisement -

ಬೆಂಗಳೂರು: ಅಧ್ಯಕ್ಷ ಖ್ಯಾತಿಯ ನಟಿ ಆರೋಹಿತ ರಾಜಕೀಯ ರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಆಮ್ ಆದ್ಮಿ ಪಾರ್ಟಿಗೆ ನಟಿ ಆರೋಹಿತ ಸೇರ್ಪಡೆಯಾಗಿದ್ದಾರೆ. ಎಎಪಿ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಅವರು ನಟಿ ಆರೋಹಿತರನ್ನ ಸ್ವಾಗತಿಸಿದ್ದಾರೆ. ಇನ್ನು ಈ ವೇಳೆ ನಟಿ ವಸಂತನಗರ ಕ್ಷೇತ್ರದಿಂದ ಚುನಾವಣೆಗೆ ನಿಲ್ಲುವ ಬಯಕೆ ಅನ್ನು ವ್ಯಕ್ತಪಡಿಸಿದ್ದಾರೆ.

ಬಿ.ಕಾಂ ಪದವೀಧರೆಯಾಗಿರುವ ಆರೋಹಿತ ನಟನೆ ಅಲ್ಲದೆ ಅವರೊಬ್ಬ ಉತ್ತಮ ಕರಾಟೆ ಪಟು. ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ ಗಳಿಸಿದ್ದಾರೆ. ಹಲವಾರು ಚಿತ್ರಗಳಲ್ಲಿ ನಟಿಸಿರುವ ಆರೋಹಿತಾಗೆ ʼಅಧ್ಯಕ್ಷʼ ಸಿನಿಮಾ ಸ್ಟಾರ್ಟ್‌ ಅಪ್‌ ನೀಡಿತ್ತು. ಇತ್ತೀಚೆಗೆ ನಟ ಟೆನ್ನಿಸ್ ಕೃಷ್ಣ ಅವರು ಮಾಜಿ ಐಪಿಎಸ್ ಅಧಿಕಾರಿ, ಬೆಂಗಳೂರು ಕಮೀನರ್ ಭಾಸ್ಕರ್ ರಾವ್ ನೇತೃತ್ವದಲ್ಲಿ ಎಎಪಿಗೆ ಸೇರ್ಪಡೆಯಾಗಿದ್ದರು.

- Advertisement -

Latest News

error: Content is protected !!