Thursday, June 4, 2026
Homeತಾಜಾ ಸುದ್ದಿಪರಪ್ಪನ ಅಗ್ರಹಾರದಲ್ಲಿ ನಟ ದರ್ಶನ್ ಅವರನ್ನು ಭೇಟಿಯಾದ ನಟ ವಿನೋದ್ ಪ್ರಭಾಕರ್

ಪರಪ್ಪನ ಅಗ್ರಹಾರದಲ್ಲಿ ನಟ ದರ್ಶನ್ ಅವರನ್ನು ಭೇಟಿಯಾದ ನಟ ವಿನೋದ್ ಪ್ರಭಾಕರ್

- Advertisement -
- Advertisement -

ಬೆಂಗಳೂರು : ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ ಅವರನ್ನು ನಟ, ಡಿ ಬಾಸ್ ಸ್ನೇಹಿತ ವಿನೋದ್ ಪ್ರಭಾಕರ್ ಭೇಟಿ ಮಾಡಿದ್ದಾರೆ.

ತಮ್ಮ ಸ್ನೇಹಿತರೊಂದಿಗೆ ಜೈಲಿಗೆ ಆಗಮಿಸಿದ ನಟ ವಿನೋದ್ ಪ್ರಭಾಕರ್ ದರ್ಶನ್ ಅವರನ್ನು ಭೇಟಿಯಾದ್ರು. ಬಳಿಕ ಮಾತನಾಡಿದ ಅವರು ನಾನು ಜಸ್ಟ್ ಕೆಲವೇ ಸೆಕೆಂಡ್ ಅಷ್ಟೇ ಅವರ ಜೊತೆ ಮಾತನಾಡಿದೆ. ಅವರು ನನ್ನನ್ನು ನೋಡುತ್ತಿದ್ದಂತೆ ಟೈಗರ್ ಅಂದ್ರು. ಆಮೇಲೆ ಏನು ಮಾತನಾಡಲಿಲ್ಲ ಎಂದು ವಿನೋದ್ ಹೇಳಿದ್ದಾರೆ.

ಇನ್ನು ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿರುವ ನಟ ದರ್ಶನ್‌ ಗೆ ವಿಶೇಷ ಸೆಲ್‌ ನಲ್ಲಿ ಇಡಲಾಗಿದ್ದು, ದರ್ಶನ್‌ ಯಾರೊಂದಿಗೆ ಹೆಚ್ಚು ಮಾತನಾಡುತ್ತಿಲ್ಲ. ಜೈಲು ಮೆನವಿನಂತೆ ನೀಡಿದ ಉಪಹಾರ ಹಾಗೂ ಊಟ ಮಾಡುತ್ತಿದ್ದಾರೆ ಎನ್ನಲಾಗಿದೆ.

- Advertisement -

Latest News

error: Content is protected !!